ಏಶ್ಯ ಕಪ್ | ನಾವು ಹಸ್ತಲಾಘವ ಮಾಡಬೇಕಿತ್ತು: ಶಶಿ ತರೂರ್

Photo - PTI
ಹೊಸದಿಲ್ಲಿ: ನಮಗೆ ಪಾಕಿಸ್ತಾನದ ವಿರುದ್ಧ ಬಲವಾದ ವಿರೋಧವಿರುವುದಾದರೆ, ಭಾರತ ತಂಡವು ಅದರೊಂದಿಗೆ ಪಂದ್ಯ ಆಡಬಾರದಿತ್ತು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟರು.
ANI ಸುದ್ದಿ ಸಂಸ್ಥೆಯೊಂದಿಗೆ ಗುರುವಾರ ಮಾತನಾಡಿದ ಶಶಿ ತರೂರ್, ಕ್ರೀಡಾ ಸ್ಫೂರ್ತಿಯನ್ನು ರಾಜಕೀಯ ಹಾಗೂ ಸೇನಾ ಸಂಘರ್ಷದಿಂದ ಹೊರಗಿಡಬೇಕು ಎಂದು ಇತ್ತೀಚೆಗೆ ನಡೆದ ಟಿ-20 ಏಶ್ಯ ಕಪ್ ನಲ್ಲಿ ಭಾರತೀಯ ಕ್ರಿಕೆಟಿಗರು ಪಾಕಿಸ್ತಾನ ಕ್ರಿಕೆಟಿಗರ ಕೈಕುಲುಕಲು ನಿರಾರಿಸಿದ ಘಟನೆಯನ್ನು ಉಲ್ಲೇಖಿಸಿ ಹೇಳಿದರು.
“ಒಮ್ಮೆ ಆಟವಾಡಲು ನಿರ್ಧರಿಸಿದ ನಂತರ, ನಮಗೆ ಪಾಕಿಸ್ತಾನದ ಬಗ್ಗೆ ಬಲವಾದ ವಿರೋಧವಿರುವುದಾದರೆ ನಾವು ಅವರೊಂದಿಗೆ ಆಟವಾಡಬಾರದಿತ್ತು” ಎಂದು ಅವರು ಅಭಿಪ್ರಾಯಪಟ್ಟರು.
“ಆದರೆ, ಒಂದು ವೇಳೆ ನಾವು ಅವರೊಂದಿಗೆ ಆಟವಾಡಲು ನಿರ್ಧರಿಸಿದಾಗ, ನಾವು ಕ್ರೀಡಾ ಸ್ಫೂರ್ತಿಯೊಂದಿಗೆ ಆಡಬೇಕಿತ್ತು ಹಾಗೂ ನಾವು ಅವರ ಕೈ ಕುಲಕಬೇಕಿತ್ತು” ಎಂದು ಅವರು ಹೇಳಿದರು.
ಎರಡೂ ಬದಿಯ ವರ್ತನೆಯಲ್ಲಿ ಕ್ರೀಡಾ ಮನೋಭಾವದ ಕೊರತೆ ಇತ್ತು ಎಂದೂ ಅವರು ಬೇಸರ ವ್ಯಕ್ತಪಡಿಸಿದರು.





