ಪಶ್ಚಿಮ ಬಂಗಾಳ | ಶಾಲೆಯ ಬಳಿ ಬಾಂಬ್ ಸ್ಫೋಟ,ಓರ್ವನ ಮೃತ್ಯು

ಸಾಂದರ್ಭಿಕ ಚಿತ್ರ | NDTV
ಕೋಲ್ಕತಾ,ಆ.18: ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳ ಜಿಲ್ಲೆಯಲ್ಲಿ ಶಾಲೆಯೊಂದರ ಹೊರಗೆ ಸೋಮವಾರ ಬಾಂಬ್ ಸ್ಫೋಟಗೊಂಡಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಜಿಲ್ಲೆಯ ಮಧ್ಯಮ ಗ್ರಾಮ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರೌಢಶಾಲೆಯ ಮುಂದೆ ಬೆಳಗಿನ ಜಾವ ಸ್ಫೋಟ ಸಂಭವಿಸಿದೆ ಎಂದು ಹೇಳಿದರು.
ಸ್ಫೋಟದಲ್ಲಿ ಓರ್ವ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಬರಸಾತ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು,ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬರಸಾತ್ ಪೋಲಿಸ್ ಜಿಲ್ಲಾ ಎಸ್ಪಿ ಪ್ರತೀಕ್ಷಾ ಜಾರ್ಖರಿಯಾ ತಿಳಿಸಿದರು.
ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರತಿನ್ ಘೋಷ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ವ್ಯಕ್ತಿ ಹೊರರಾಜ್ಯದ ನಿವಾಸಿ ಎಂದು ಪೋಲಿಸರು ತಿಳಿಸಿದರು.
Next Story





