ಪಶ್ಚಿಮ ಬಂಗಾಳ |ಬಾಲಕಿಯ ತುಂಡರಿಸಿದ ಮೃತದೇಹ ಪತ್ತೆ : ಶಾಲಾ ಅಧ್ಯಾಪಕನ ಬಂಧನ

ಸಾಂದರ್ಭಿಕ ಚಿತ್ರ
ಕೋಲ್ಕತಾ, ಸೆ. 17: ಸುಮಾರು 3 ವಾರಗಳ ಹಿಂದೆ ನಾಪತ್ತೆಯಾಗಿದ್ದ 13 ವರ್ಷದ ಬುಡಕಟ್ಟು ಬಾಲಕಿಯ ಕೊಳೆತ ಮೃತದೇಹವನ್ನು ಪಶ್ಚಿಮಬಂಗಾಳದ ಬಿರ್ಭೂಮ್ ಜಿಲ್ಲೆಯ ಪೊಲೀಸರು ಸೋಮವಾರ ರಾತ್ರಿ ಕಾಲಿಡಂಗಾ ಗ್ರಾಮದ ಸಮೀಪದ ಸೇತುವೆಯ ಕೆಳಗೆ ಪತ್ತೆ ಮಾಡಿದ್ದಾರೆ.
ಬಾಲಕಿಯ ಮೃತದೇಹವನ್ನು ಮೂರು ತುಂಡುಗಳಾಗಿ ಕತ್ತರಿಸಿ ಸೇತುವೆಯ ಕೆಳಗೆ ಎಸೆಯಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಬರಮಸೀಯ ಗ್ರಾಮದ ನಿವಾಸಿಯಾದ ಬಾಲಕಿ ರಾಮಪುರ್ಹಾತ್ ಶ್ಯಂಪಾಹರಿ ಶ್ರೀ ರಾಮಕೃಷ್ಣ ಶಿಕ್ಷಾಪೀಠದ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಈಕೆ ಆಗಸ್ಟ್ 28ರಂದು ನಾಪತ್ತೆಯಾಗಿದ್ದಳು.
ಬಾಲಕಿಯ ಅಪಹರಣ ಹಾಗೂ ಹತ್ಯೆ ಆರೋಪದಲ್ಲಿ ಶಾಲೆಯ ಭೌತಶಾಸ್ತ್ರ ಅಧ್ಯಾಪಕ ಮನೋಜ್ ಕುಮಾರ್ ಪಾಲ್ನನ್ನು ಪೊಲೀಸರು ಬಂಧಿಸಿದ್ದಾರೆ. ಪಾಲ್ ಕೆಲವು ಸಮಯದಿಂದ ಆಕೆಯನ್ನು ಹಿಂಬಾಲಿಸುತ್ತಿದ್ದ. ಆಕೆಯ ನಾಪತ್ತೆಗೆ ಆತನೇ ಹೊಣೆ ಎಂದು ಬಾಲಕಿಯ ಕುಟುಂಬ ಆರೋಪಿಸಿದ ಬಳಿಕ ಪೊಲೀಸರು ಪಾಲ್ನನ್ನು ಬಂಧಿಸಿದ್ದಾರೆ.
Next Story





