ಪಶ್ಚಿಮಬಂಗಾಳ: ಬಾಂಬ್ ಸ್ಫೋಟ ಓರ್ವ ಮೃತ್ಯು; ಇನ್ನೋರ್ವನಿಗೆ ಗಾಯ

Photo : indianexpress
ಕೋಲ್ಕತಾ: ಪಶ್ಚಿಮಬಂಗಾಳದ ಪೂರ್ಬ ಬರ್ಧಮಾನ್ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಪೋಟಗೊಂಡು ಓರ್ವ ಮೃತಪಟ್ಟಿದ್ದಾನೆ ಹಾಗೂ ಇನ್ನೋರ್ವ ಗಾಯಗೊಂಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ಘಟನೆ ಕಟ್ವಾ ಉಪ ವಿಭಾಗ ವ್ಯಾಪ್ತಿಯ ರಾಜೋವಾ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುಮಾರು 8.30ಕ್ಕೆ ಸಂಭವಿಸಿದೆ. ಈ ಬಾಂಬ್ ಸ್ಫೋಟ ಎಷ್ಟು ತೀವ್ರವಾಗಿತ್ತೆಂದರೆ, ಬಾಂಬ್ ತಯಾರಿಸುತ್ತಿದ್ದ ಮನೆಯ ಛಾವಣಿಯೇ ಹಾರಿ ಹೋಗಿದೆ ಎಂದು ಅವರು ತಿಳಿಸಿದ್ದಾರೆ.
ಕಚ್ಛಾ ಬಾಂಬ್ ತಯಾರಿಸುವುದಕ್ಕಾಗಿ ಸಮಾಜ ವಿರೋಧಿ ಶಕ್ತಿಗಳು ಆಗಾಗ ಭೇಟಿ ನೀಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿರುವ ಪರಿತ್ಯಕ್ತ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಇಡೀ ಪ್ರದೇಶವನ್ನು ನಡುಗಿಸುವ ಸತತ ಎರಡು ಸ್ಫೋಟಗಳು ಸಂಭವಿಸಿದವು. ಸ್ಫೋಟದ ತೀವ್ರತೆಗೆ ಸಮೀಪದ ಮನೆಗಳ ಬಾಗಿಲು ಹಾಗೂ ಕಿಟಕಿಗಳಿಗೆ ಹಾನಿ ಉಂಟಾಗಿವೆ ಎಂದು ಅವರು ತಿಳಿಸಿದ್ದಾರೆ.
‘‘ಈ ಮನೆಯನ್ನು ಬಾಂಬ್ ತಯಾರಿಸುವ ಘಟಕವಾಗಿ ಅಥವಾ ಇತರ ಸಂಪರ್ಕಗಳಿಗಾಗಿ ಬಳಸಲಾಗುತ್ತಿದೆಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.