Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತೇಜಸ್ವಿ ಸೂರ್ಯಗೂ ವಕ್ಫ್ ಬೋರ್ಡ್ ಗೂ ಏನು...

ತೇಜಸ್ವಿ ಸೂರ್ಯಗೂ ವಕ್ಫ್ ಬೋರ್ಡ್ ಗೂ ಏನು ಸಂಬಂಧ ?

ವಾರ್ತಾಭಾರತಿವಾರ್ತಾಭಾರತಿ10 Aug 2024 6:44 PM IST
share
ತೇಜಸ್ವಿ ಸೂರ್ಯಗೂ ವಕ್ಫ್ ಬೋರ್ಡ್ ಗೂ ಏನು ಸಂಬಂಧ ?

ಬಾಯಿ ಬಿಟ್ಟರೆ ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡುವ ಸಂಸದರಿಗೂ ಮುಸ್ಲಿಮರ ವಕ್ಫ್ ಗೂ ಏನು ನಂಟು ? ಇಸ್ಲಾಂ, ಮುಸ್ಲಿಮರು, ಅವರ ನಂಬಿಕೆಗಳು ಹಾಗು ಸಂಸ್ಥೆಗಳ ಬಗ್ಗೆ ಸಂಸದ ಸ್ಥಾನದ ಘನತೆಯನ್ನೂ ಕಾಪಾಡಿಕೊಳ್ಳದೆ ಸುಳ್ಳಾರೋಪ ಮಾಡುವ ಸಂಸದ ಅತ್ಯಂತ ಮಹತ್ವದ ವಕ್ಫ್ ವಿಷಯಕ್ಕೆ ಸಂಬಂಧಿಸಿದ ವಿವಾದಾತ್ಮಕ ಮಸೂದೆ ಕುರಿತ ಸಮಿತಿಯಲ್ಲಿ ಏನು ಮಾಡ್ತಾರೆ ?

ವಕ್ಫ್ ತಿದ್ದುಪಡಿ ಮಸೂದೆಯನ್ನು ಪರಿಶೀಲಿಸಲಿರುವ ಜಂಟಿ ಸದನ ಸಮಿತಿ ಅಥವಾ ಜೆಪಿಸಿಗೆ 31 ಸದಸ್ಯರನ್ನು ನೇಮಿಸಲಾಗಿದ್ದು, ಈ ಪೈಕಿ 21 ಮಂದಿ ಲೋಕಸಭಾ ಸದಸ್ಯರು ಹಾಗೂ 10 ಮಂದಿ ರಾಜ್ಯಸಭಾ ಸದಸ್ಯರನ್ನು ಒಳಗೊಂಡಿರಲಿದೆ. ಈ ಸಮಿತಿಯು ಮುಂದಿನ ಅಧಿವೇಶನದ ವೇಳೆಗೆ ತನ್ನ ವರದಿಯನ್ನು ಸಲ್ಲಿಸಲಿದೆ.

ಈ ಸಮಿತಿಯಲ್ಲಿ ಸದಸ್ಯರಾಗಿ ನೇಮಕವಾದವರ ಬಗ್ಗೆ ಈಗ ಚರ್ಚೆ ಶುರುವಾಗಿದೆ.

ಈ ಜೆಪಿಸಿಯಲ್ಲಿ 1. ಜಗದಾಂಬಿಕಾ ಪಾಲ್ (ಬಿಜೆಪಿ), 2. ಪಿ.ನಿಶಿಕಾಂತ್ ದುಬೆ (ಬಿಜೆಪಿ), 3. ತೇಜಸ್ವಿ ಸೂರ್ಯ (ಬಿಜೆಪಿ), 4. ಅಪರಾಜಿತ ಸಾರಂಗಿ (ಬಿಜೆಪಿ),5. ಸಂಜಯ್ ಜೈಸ್ವಾಲ್ (ಬಿಜೆಪಿ), 6. ದಿಲೀಪ್ ಸಾಯಿಕಿಯ (ಬಿಜೆಪಿ), 7. ಅಭಿಜಿತ್ ಗಂಗೋಪಾಧ್ಯಾಯ (ಬಿಜೆಪಿ),8. ಡಿ.ಕೆ.ಅರುಣ (ಬಿಜೆಪಿ), 9. ಗೌರವ್ ಗೊಗೊಯಿ (ಕಾಂಗ್ರೆಸ್), 10. ಇಮ್ರಾನ್ ಮಸೂದ್ (ಕಾಂಗ್ರೆಸ್), 11. ಮುಹಮ್ಮದ್ ಜಾವೇದ್ (ಕಾಂಗ್ರೆಸ್), 12. ಮುಹಿಬುಲ್ಲಾ (ಸಮಾಜವಾದಿ ಪಕ್ಷ), 13. ಕಲ್ಯಾಣ್ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್ ಪಕ್ಷ), 14. ಎ.ರಾಜಾ (ಡಿಎಂಕೆ), 15. ಲವು ಶ್ರೀ ಕೃಷ್ಣ ದೇವರಾಯಲು (ಟಿಡಿಪಿ), 16. ದಿಲೇಶ್ವರ್ ಕಮೈತ್ (ಜೆಡಿಯು), 17. ಅರವಿಂದ್ ಸಾವಂತ್ (ಶಿವಸೇನೆ (ಉದ್ಧವ್ ಠಾಕ್ರೆ ಬಣ)), 18. ಸುರೇಶ್ ಮಾತ್ರೆ (ಎನ್ಸಿಪಿ (ಶರದ್ ಪವಾರ್ ಬಣ)), 19. ನರೇಶ್ ಮಸ್ಕೆ (ಶಿವಸೇನೆ), 20. ಅರುಣ್ ಭಾರತಿ (ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್ ಪಾಸ್ವಾನ್ ಬಣ), 21. ಅಸದುದ್ದೀನ್ ಉವೈಸಿ (ಎಐಎಂಐಎಂ) ಇಷ್ಟು ಸದಸ್ಯರು ಲೋಕಸಭೆಯಿಂದ ಇದ್ದಾರೆ.

ರಾಜ್ಯಸಭೆಯಿಂದ

1. ಬೃಜ್ ಲಾಲ್ (ಬಿಜೆಪಿ), 2. ಮೇಧಾ ವಿಶ್ರಾಮ್ ಕುಲಕರ್ಣಿ (ಬಿಜೆಪಿ), 3. ಗುಲಾಮ್ ಅಲಿ (ಬಿಜೆಪಿ), 4. ರಾಧಾ ಮೋಹನ್ ದಾಸ್ ಅಗರ್ವಾಲ್ (ಬಿಜೆಪಿ) 5. ಸೈಯದ್ ನಾಸೀರ್ ಹುಸೈನ್ (ಕಾಂಗ್ರೆಸ್),6. ಮುಹಮ್ಮದ್ ನದೀಮುಲ್ ಹಕ್ (ತೃಣಮೂಲ ಕಾಂಗ್ರೆಸ್ ಪಕ್ಷ), 7. ವಿ.ವಿಜಯಸಾಯಿ ರೆಡ್ಡಿ (ವೈಎಸ್ಆಸರ್ಸಿಸಪಿ), 8. ಎಂ. ಮುಹಮ್ಮದ್ ಅಬ್ದುಲ್ಲಾ (ಡಿಎಂಕೆ), 9. ಸಂಜಯ್ ಸಿಂಗ್ (ಆಮ್ ಆದ್ಮಿ ಪಕ್ಷ), 10. ಡಾ.ಡಿ ವೀರೇಂದ್ರ ಹೆಗ್ಗಡೆ (ನಾಮನಿರ್ದೇಶನ ಸದಸ್ಯ) - ಈ ಹತ್ತು ಸದಸ್ಯರಿದ್ದಾರೆ.

ಲೋಕಸಭೆಯ 21 ಸದಸ್ಯರಲ್ಲಿ ಬಿಜೆಪಿಯ ಎಂಟು ಸದಸ್ಯರು ಸೇರಿದಂತೆ 12 ಸದಸ್ಯರು ಎನ್ ಡಿ ಎ ಮೈತ್ರಿಕೂಟಕ್ಕೆ ಸೇರಿದ್ದರೆ, ಉಳಿದ ಒಂಬತ್ತು ಮಂದಿ ವಿರೋಧ ಪಕ್ಷಗಳ ಸದಸ್ಯರಾಗಿದ್ದಾರೆ. ರಾಜ್ಯಸಭೆಯಿಂದ ನಾಲ್ಕು ಮಂದಿ ಬಿಜೆಪಿ ಸದಸ್ಯರು, ನಾಲ್ಕು ಮಂದಿ ವಿರೋಧ ಪಕ್ಷಗಳ ಸದಸ್ಯರು ಹಾಗೂ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸಿರುವ ವೈ ಎಸ್ ಆರ್ ಸಿ ಪಿ ಯ ಓರ್ವ ಸದಸ್ಯರಿದ್ದಾರೆ. ಡಾ ವೀರೇಂದ್ರ ಹೆಗ್ಗಡೆ ರಾಷ್ಟ್ರಪತಿಯಿಂದ ನಾಮನಿರ್ದೇಶನ ಆಗಿರುವ ಪಕ್ಷೇತರ ಸದಸ್ಯರು.

ಜಂಟಿ ಸದನ ಸಮಿತಿಯ ನೇತೃತ್ವವನ್ನು ಬಿಜೆಪಿಯ ಜಗದಾಂಬಿಕಾ ಪಾಲ್ ವಹಿಸಿಕೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದರೂ, ಈ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಗುರುವಾರ ಲೋಕಸಭೆಯಲ್ಲಿ ಮಂಡಿಸಲಾಗಿದ್ದ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಸದನದಲ್ಲಿ ಕಾವೇರಿದ ಚರ್ಚೆ ನಡೆದಿತ್ತು. ಇದಾದ ನಂತರ, ಮಸೂದೆಯನ್ನು ಜಂಟಿ ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಈ ಸಮಿತಿಯು ಮುಂದಿನ ಅಧಿವೇಶನದ ಪ್ರಥಮ ವಾರದ ಕೊನೆಯ ದಿನದಂದು ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.

ಜಂಟಿ ಸಂಸದೀಯ ಸಮಿತಿ ಅಥವಾ ಜೆಪಿಸಿಯನ್ನು ಯಾವುದಾದರೂ ಒಂದು ನಿರ್ದಿಷ್ಟ ವಿಷಯ ಅಥವಾ ಮಸೂದೆಯ ಕುರಿತು ವಿವರವಾಗಿ ಪರಿಶೀಲಿಸಿ ಶಿಫಾರಸು ಮಾಡಲು ರೂಪಿಸಲಾಗುತ್ತದೆ. ಅದರಲ್ಲಿ ಲೋಕಸಭೆ ಹಾಗು ರಾಜ್ಯಸಭೆಯ ಸದಸ್ಯರಿರುತ್ತಾರೆ. ಆಡಳಿತ ಪಕ್ಷ ಹಾಗು ವಿಪಕ್ಷದ ಸಂಸದರು ಸದಸ್ಯರಾಗಿರುತ್ತಾರೆ. ಲೋಕಸಭಾ ಸ್ಪೀಕರ್ ಆಯ್ಕೆ ಮಾಡಿದ ಒಬ್ಬ ಲೋಕಸಭಾ ಸದಸ್ಯರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಅದರಲ್ಲಿರುವ ಸದಸ್ಯರ ಸಂಖ್ಯೆಗೆ ಯಾವುದೇ ನಿರ್ದಿಷ್ಟ ಮಿತಿ ಇಲ್ಲ. ಜೆಪಿಸಿ ನೀಡುವ ಶಿಫಾರಸು ಸಲಹೆ ಮಾತ್ರ, ಅದನ್ನು ಸರಕಾರ ಸ್ವೀಕರಿಸಲೇಬೇಕು ಎಂದೇನಿಲ್ಲ. ಆದರೆ ಸಾಮಾನ್ಯವಾಗಿ ಜೆಪಿಸಿಯಲ್ಲಿ ಆಡಳಿತ ಪಕ್ಷದವರೇ ಹೆಚ್ಚಿದ್ದು ಅದರ ಶಿಫಾರಸ್ಸನ್ನು ಸರಕಾರ ಸ್ವೀಕರಿಸುತ್ತದೆ.

ಜೆಪಿಸಿಯಲ್ಲಿ ಬಿಜೆಪಿ, ಕಾಂಗ್ರೆಸ್ ಸಹಿತ ಎಲ್ಲ ಪ್ರಮುಖ ಪಕ್ಷದ ಸದಸ್ಯರಿರುವುದು ಸಹಜ, ಸ್ವಾಭಾವಿಕ. ಬಿಜೆಪಿ ನೇತೃತ್ವದ ಸರಕಾರವೇ ವಕ್ಫ್ ಕುರಿತ ಈ ಹೊಸ ಮಸೂದೆಯನ್ನು ತಂದಿರುವುದರಿಂದ ಆ ಪಕ್ಷದ ಸದಸ್ಯರು ಜೆಪಿಸಿಯಲ್ಲೂ ಅದನ್ನು ಬೆಂಬಲಿಸುವುದು ಖಚಿತ ಹಾಗು ನಿರೀಕ್ಷಿತ. ಆದರೆ ತೇಜಸ್ವಿ ಸೂರ್ಯರನ್ನು ಈ ಜೆಪಿಸಿಯಲ್ಲಿ ಸದಸ್ಯರಾಗಿಸುವ ಮೂಲಕ ಬಿಜೆಪಿ ಯಾವ ಸಂದೇಶ ರವಾನಿಸುತ್ತಿದೆ ಎಂದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿದೆ.

ಮುಸ್ಲಿಮರ ಬಗ್ಗೆ ದ್ವೇಷ ಭಾಷಣ ಮಾಡುವ, ಅವರ ಅವಹೇಳನ ಮಾಡುವ, ಅವರ ವಿರುದ್ಧ ಸುಳ್ಳಾರೋಪ ಮಾಡುವ, ಅವರ ವಿರುದ್ಧ ಹಿಂಸೆಗೆ ಪರೋಕ್ಷ ಕರೆ ಕೊಡುವ ಸಂಸದರೊಬ್ಬರನ್ನು ಮುಸ್ಲಿಮರಿಗೆ ಸಂಬಂಧಿಸಿದ ಮಹತ್ವದ ಮಸೂದೆಯ ಜೆಪಿಸಿಗೆ ನೇಮಕ ಮಾಡಿ ಸಾಧಿಸೋದೇನು ?

ಕೊರೊನದಂತಹ ಸಾಂಕ್ರಾಮಿಕ ಜನರನ್ನು ಕಾಡುತ್ತಿದ್ದಾಗಲೂ ತೇಜಸ್ವಿ ಸೂರ್ಯ ಮುಸ್ಲಿಮರ ವಿರುದ್ಧ ಸುಳ್ಳಾರೋಪ ಮಾಡಿ ದ್ವೇಷ ಹರಡಿದ ಕುಖ್ಯಾತಿ ಹೊಂದಿದ್ದಾರೆ.

ವಕ್ಫ್ ಮಸೂದೆಯಂತಹ ವಿಷಯದಲ್ಲಿ ಮುಸ್ಲಿಮರ ಸ್ಥಿತಿಗತಿ, ವಕ್ಫ್ ನಲ್ಲಿ ಏನಾಗುತ್ತಿದೆ, ಏನು ಸಮಸ್ಯೆಗಳಿವೆ, ಏನು ಪರಿಹಾರ ಸಾಧ್ಯ, ಈ ಮಸೂದೆಯಲ್ಲಿ ಅದಕ್ಕೇನು ದಾರಿಯಿದೆ ಇತ್ಯಾದಿ ವಿಷಯಗಳ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು.

ವಕ್ಫ್ ಕುರಿತ ಚರ್ಚೆಯಲ್ಲಿ ತನ್ನ ದ್ವೇಷ ಹಾಗು ಸುಳ್ಳುಗಳಿಂದ ತೇಜಸ್ವಿ ಸೂರ್ಯ ಅದೇನು ಕೊಡುಗೆ ಕೊಡುತ್ತಾರೆ ? ಪ್ರಧಾನಿ ಮೋದಿ ಚುನಾವಣೆ ಸಮಯದಲ್ಲಿ ಮಾಡಿದ ಮಟನ್, ಮಂಗಲ್ ಸೂತ್ರ, ಮಸೀದಿ ಇಂತಹದ್ದೇ ಧಾಟಿಯ ಮಾತಾಡಲು ಜೆಪಿಸಿಗೆ ತೇಜಸ್ವಿ ಸೂರ್ಯರನ್ನು ಹಾಕಲಾಗಿದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಮೋದಿ ಸರಕಾರಕ್ಕೆ ಮುಸ್ಲಿಮರ ಬಗ್ಗೆ, ಅವರ ಸಮಸ್ಯೆಗಳ ಬಗ್ಗೆ ಅದೆಷ್ಟು ಪ್ರಾಮಾಣಿಕ ಕಾಳಜಿ ಇದೆ ಅನ್ನೋದು ತೇಜಸ್ವಿ ಸೂರ್ಯ ಅವರ ನೇಮಕದ ಮೂಲಕ ಮತ್ತೊಮ್ಮೆ ಬಹಿರಂಗವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X