Mumbai | ಎರಡು ವಿಮಾನಗಳ ನಡುವೆ ಢಿಕ್ಕಿ

Photo Credit : ndtv
ಮುಂಬೈ, ಫೆ. 3: ಮುಂಬೈಯ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಎರಡು ಪ್ರಯಾಣಿಕ ವಿಮಾನಗಳ ನಡುವೆ ಢಿಕ್ಕಿ ಸಂಭವಿಸಿದೆ.
ಘಟನೆ ಸಂಭವಿಸುವ ಸಂದರ್ಭದಲ್ಲಿ ಎರಡೂ ವಿಮಾನಗಳಲ್ಲಿ ಪ್ರಯಾಣಿಕರಿದ್ದರು.ಯಾರಿಗೂ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಕೊಯಂಬತ್ತೂರಿಗೆ ಹಿಂದಿರುಗಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನ ಹಾಗೂ ಹೈದರಾಬಾದ್ ನಿಂದ ಆಗಮಿಸಿದ ಬಳಿಕ ನಿಲುಗಡೆ ಸ್ಥಳಕ್ಕೆ ಚಲಿಸುತ್ತಿದ್ದ ಇಂಡಿಗೋ ವಿಮಾನದ ನಡುವೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ.
“ಎರಡೂ ವಿಮಾನಗಳ ರೆಕ್ಕೆಗಳು ಢಿಕ್ಕಿಯಾಗಿವೆ. ಇದರಿಂದ ನಮ್ಮ ವಿಮಾನಕ್ಕೆ ಹಾನಿ ಸಂಭವಿಸಿದೆ,” ಎಂದು ಏರ್ ಇಂಡಿಯಾ ಸಂಸ್ಥೆ ತಿಳಿಸಿದೆ.
Next Story





