ಲಿಫ್ಟ್ನೊಳಗೆ ನಾಯಿ ತರದಂತೆ ಮನವಿ ಮಾಡಿದ ಬಾಲಕನ ಮೇಲೆ ಹಲ್ಲೆ : ಮಹಿಳೆಯ ಬಂಧನ
ಭಯದಿಂದ ಲಿಫ್ಟ್ಗೆ ನಾಯಿ ತರಬೇಡಿ ಎಂದು ಕೈಮುಗಿದು ವಿನಂತಿಸಿದ್ದ ಬಾಲಕ

Photo credit: X/AnshulGarg
ಲಕ್ನೋ : ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ವೆಸ್ಟ್ನಲ್ಲಿರುವ ವಸತಿ ಕಟ್ಟಡದಲ್ಲಿ ಭಯದಿಂದ ಲಿಫ್ಟ್ಗೆ ನಾಯಿಯನ್ನು ಕರೆತರದಂತೆ ಕೈಮುಗಿದು ವಿನಂತಿಸಿದರೂ ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗೌರ್ ಸಿಟಿ 2ರ 12ನೇ ಅವೆನ್ಯೂದಲ್ಲಿ ಬುಧವಾರ ಸಂಜೆ 5 ಗಂಟೆಯ ವೇಳೆ ಈ ಘಟನೆ ನಡೆದಿದೆ. ಮಹಿಳೆ ತನ್ನ ಸಾಕು ನಾಯಿಯೊಂದಿಗೆ ಲಿಫ್ಟ್ಗೆ ಪ್ರವೇಶಿಸಿದ್ದಾಳೆ. ಮೊದಲೇ ನಾಯಿಯನ್ನು ನೋಡಿ ಭಯಗೊಂಡಿದ್ದ ಬಾಲಕ ಲಿಫ್ಟ್ನೊಳಗೆ ನಾಯಿಯನ್ನು ಕರೆತರದಂತೆ ಮನವಿಯನ್ನು ಮಾಡಿದ್ದಾನೆ.
ಲಿಫ್ಟ್ನೊಳಗಿನ ಸಿಸಿಟಿವಿಯಲ್ಲಿ ಘಟನೆಯ ದೃಶ್ಯ ಸೆರೆಯಾಗಿದೆ. ನಾಯಿಯನ್ನು ನೋಡಿ ಭಯಗೊಂಡ ಬಾಲಕ ಎರಡು ಕೈಗಳನ್ನು ಮುಗಿದು ನಾಯಿಯನ್ನು ಲಿಫ್ಟ್ ನೊಳಗೆ ತರದಂತೆ ಮನವಿ ಮಾಡಿದ್ದಾನೆ. ಈ ವೇಳೆ ಬಾಲಕನಿಗೆ ಲಿಫ್ಟ್ ನಿಂದ ಹೊರಹೋಗುವಂತೆ ಬೆದರಿಸಿದ ಮಹಿಳೆ ಅವಳಿಗೆ ಹೋಗಬೇಕಾದ ಮಹಡಿಗೆ ಬಟನ್ ಒತ್ತಿದ್ದಾಳೆ. ಬಳಿಕ ಬಾಲಕನನ್ನು ಮಹಿಳೆ ಲಿಫ್ಟ್ನಿಂದ ಹೊರಗೆ ಎಳೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಆ ಬಳಿಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ. ಮಹಿಳೆ ಬಾಲಕನ ಮೇಲೆ ಹಲ್ಲೆ ನಡೆಸಿರುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿದೆ.
ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.
Some dog lovers are crazy and stupid. They don't understand that not everybody is comfortable with dogs specially children. This lady is sick who throws out the kid for his dog and slaps her. They don't know distance is important. Society should take action against her. The kid… pic.twitter.com/E1cauVl7oM
— Anshul Garg (@AnshulGarg1986) February 19, 2025







