ಕೇರಳ | ವಿಳಿಂಜಂ ಬಂದರಿಗೆ ಆಗಮಿಸಿದ ವಿಶ್ವದ ಅತಿದೊಡ್ಡ ಕಂಟೇನರ್ ಹಡಗು

Photo credit: PTI
ತಿರುವನಂತಪುರಂ: ವಿಶ್ವದ ಅತಿದೊಡ್ಡ ಕಂಟೇನರ್ ಹಡಗು MSC IRINA ಸೋಮವಾರ ಕೇರಳದ ತಿರುವನಂತಪುರಂನಲ್ಲಿರುವ ವಿಳಿಂಜಂ ಅಂತಾರಾಷ್ಟ್ರೀಯ ಬಂದರಿಗೆ ಆಗಮಿಸಿದೆ. ಹಡಗಿನ ಬರ್ತಿಂಗ್ ಪ್ರಕ್ರಿಯೆ ನಡೆಯುತ್ತಿದೆ.
TEU ((Twenty-foot Equivalent Unit) ಸಾಮರ್ಥ್ಯದ MSC IRINA ವಿಶ್ವದ ಅತಿದೊಡ್ಡ ಕಂಟೇನರ್ ಹಡಗು ಎಂದು ಗುರುತಿಸಲ್ಪಟ್ಟಿದೆ.
ಅದಾನಿ ಗ್ರೂಪ್ ನಿರ್ವಹಿಸುವ ವಿಳಿಂಜಂ ಅಂತಾರಾಷ್ಟ್ರೀಯ ಬಂದರನ್ನು ಮೇ 2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು.
MSC IRINA 24,346 TEU ಸಾಮರ್ಥ್ಯವನ್ನು ಹೊಂದಿದೆ. 399.9 ಮೀಟರ್ ಉದ್ದ, 61.3 ಮೀಟರ್ ಅಗಲ ಮತ್ತು FIFA- ಗೊತ್ತುಪಡಿಸಿದ ಫುಟ್ಬಾಲ್ ಮೈದಾನಕ್ಕಿಂತ ಸರಿಸುಮಾರು ನಾಲ್ಕು ಪಟ್ಟು ಉದ್ದವಾಗಿದೆ.
Next Story





