ಬ್ರಿಜ್ ಭೂಷಣ್ ನಿವಾಸದಿಂದಲೇ ಕಾರ್ಯಚರಿಸುತ್ತಿರುವ ಕುಸ್ತಿ ಫೆಡರೇಶನ್!

ಬ್ರಿಜ್ ಭೂಷಣ್ ಶರಣ್ ಸಿಂಗ್ (PTI)
ಹೊಸದಿಲ್ಲಿ : ಬ್ರಿಜ್ ಭೂಷಣ್ ಶರಣ್ ಸಿಂಗ್ ನಿವಾಸದಿಂದ ಭಾರತೀಯ ಕುಸ್ತಿ ಫೆಡರೇಶನ್ ಕಾರ್ಯಾಚರಣೆ ನಡೆಸುತ್ತಿದೆ ಎಂದು ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಹೇಳಿದ್ದು, ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಮುಂದಿನ ತಿಂಗಳು ಕಚೇರಿಯನ್ನು ಕನ್ನಾಟ್ ಪ್ಲೇಸ್ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದೆ ಎಂದು ವರದಿಯಾಗಿದೆ.
ವಿವಾದದ ಬಳಿಕ 2023ರ ಡಿಸೆಂಬರ್ ನಲ್ಲಿ ಕ್ರೀಡಾ ಸಚಿವಾಲಯ WFIಯನ್ನು ಅಮಾನತುಗೊಳಿಸಿತ್ತು. ಆದರೆ, ಕಚೇರಿ ಹಳೆಯ ವಿಳಾಸದಿಂದ ಅಂದರೆ WFI ಮಾಜಿ ಮುಖ್ಯಸ್ಥ ಮತ್ತು ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಅಶೋಕ ರಸ್ತೆಯಲ್ಲಿನ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
WFI ಹರಿನಗರದ ಕಚೇರಿಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ ಮತ್ತು ಕಚೇರಿಗಾಗಿ ಸೂಕ್ತ ಸ್ಥಳವನ್ನು ಹುಡುಕುತ್ತಿದ್ದೇವೆ. ಪಂಚಮಿಯಂದು ನಾವು ಹೊಸ ಕಚೇರಿಗೆ ಹೋಗುತ್ತೇವೆ, ಅಮಾನತುಗೊಳಿಸಿರುವುದರಿಂದ ಈ ಎಲ್ಲಾ ಗೊಂದಲಗಳು ಉಂಟಾಗಿವೆ. ಅದು ತೆರವುಗೊಳ್ಳುತ್ತದೆ ಮತ್ತು ನಾವು ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ ಎಂದು WFI ಮೂಲಗಳು ತಿಳಿಸಿದೆ.
ವಿನೇಶ್ ಫೋಗಟ್, ಬಜರಂಗ್ ಪುನಿಯಾ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು 2023ರ ಆರಂಭದಲ್ಲಿ ಲೈಂಗಿಕ ದೌರ್ಜನ್ಯ ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ದೇಶದಾದ್ಯಂತ ಭಾರೀ ಸದ್ದು ಮಾಡಿತ್ತು.







