ಝುಬೀನ್ ಗರ್ಗ್ ಸಾವು ಆಕಸ್ಮಿಕವಲ್ಲ, ಕೊಲೆ : ಅಸ್ಸಾಂ ವಿಧಾನಸಭೆಗೆ ತಿಳಿಸಿದ ಸಿಎಂ ಹಿಮಂತ ಬಿಸ್ವಾ ಶರ್ಮಾ

ಝುಬೀನ್ ಗರ್ಗ್ / ಹಿಮಂತ ಬಿಸ್ವಾ ಶರ್ಮಾ (Photo credit: PTI)
ಗುವಾಹಟಿ : ಗಾಯಕ ಝುಬೀನ್ ಗರ್ಗ್ ಸಾವು ಆಕಸ್ಮಿಕವಲ್ಲ, ಅವರನ್ನು ಕೊಲೆ ಮಾಡಲಾಗಿದೆ ಎಂದು ಅಸ್ಸಾಂ ವಿಧಾನಸಭೆಗೆ ಸಿಎಂ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ ಎಂದು NDTV ವರದಿ ಮಾಡಿದೆ.
ಸೆಪ್ಟೆಂಬರ್ 19ರಂದು ಸಿಂಗಾಪುರದಲ್ಲಿ ನೀರಿನಲ್ಲಿ ಮುಳುಗಿ ಅಸ್ಸಾಂ ಗಾಯಕ ಝುಬೀನ್ ಗರ್ಗ್ ಮೃತಪಟ್ಟಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಅಸ್ಸಾಂ ಪೊಲೀಸರು ಬ್ಯಾಂಡ್ ಸಹೋದ್ಯೋಗಿ ಶೇಖರ್ ಜ್ಯೋತಿ ಗೋಸ್ವಾಮಿ ಹಾಗೂ ಸಹ ಗಾಯಕಿ ಅಮೃತಪರ್ವ ಮಹಾಂತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು.
ಝುಬೀನ್ ಗರ್ಗ್ ಸಾವಿನ ಬಗ್ಗೆ ಚರ್ಚಿಸಲು ವಿರೋಧ ಪಕ್ಷ ನಿಳುವಳಿ ಮಂಡಿಸಿತ್ತು. ಈ ವೇಳೆ ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, ಇದು ಆಕಸ್ಮಿಕ ಘಟನೆಯಲ್ಲ, ಕೊಲೆ ಎಂದು ಹೇಳಿದ್ದಾರೆ.
Next Story





