ಬೆಳಗಿನ ಜಾವ ಎರಡು ಗಂಟೆಗಳನ್ನು ಹೇಗೆ ಕಳೆಯಬೇಕು? ಪೌಷ್ಠಿಕ ತಜ್ಞೆಯ ಸಲಹೆಗಳೇನು?

Image Source : Freepik
ಪೋಸ್ಟ್ನಲ್ಲಿ ಪೌಷ್ಠಿಕ ತಜ್ಞೆ ದೀಪ್ಸಿಖಾ ಜೈನ್ ಬೆಳಗ್ಗೆ ಎಚ್ಚರವಾದ ಮೇಲೆ ಮೊದಲ ಎರಡು ಗಂಟೆಗಳನ್ನು ಹೇಗೆ ಕಳೆಯುವುದು ಎಂದು ವಿವರಿಸಿದ್ದಾರೆ.
ಬೆಳಗಿನ ಜಾವ ಬೇಗನೇ ಏಳುವುದು ಅತ್ಯಗತ್ಯ. ನಿಮ್ಮ ಹವ್ಯಾಸಗಳು ಮತ್ತು ಎದ್ದ ತಕ್ಷಣ ಏನು ಸೇವಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಇಡೀ ದಿನ ಹೇಗೆ ಸಾಗುತ್ತದೆ ಎನ್ನುವುದು ಅವಲಂಬಿಸಿದೆ. ಮಾರ್ಚ್ 21ರ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಪೌಷ್ಠಿಕ ತಜ್ಞೆ ದೀಪ್ಸಿಖಾ ಜೈನ್ ಅವರು ದಿನದ ಮೊದಲ ಎರಡು ಗಂಟೆಗಳಲ್ಲಿ ದೈಹಿಕ ಶಕ್ತಿ ಮತ್ತು ಮಾನಸಿಕ ಸ್ಪಷ್ಟತೆ ಹೆಚ್ಚಿಸಲು ವಿನ್ಯಾಸಗೊಳಿಸಲಾದ ಬೆಳಗಿನ ದಿನಚರಿಯನ್ನು ವಿವರಿಸಿದ್ದಾರೆ.
“ನನಗೆ 60 ಸೆಕೆಂಡುಗಳನ್ನು ನೀಡಿ. ನೀವು ದಿನದ ಮೊದಲ ಎರಡು ಗಂಟೆಗಳನ್ನು ಹೇಗೆ ಕಳೆಯಬೇಕು ಎನ್ನುವುದನ್ನು ನಿಮಗೆ ತಿಳಿಸುತ್ತೇನೆ. ಹೀಗೆ ಬೆಳಗಿನ ಎರಡು ಗಂಟೆಗಳನ್ನು ಕಳೆದರೆ ಇಡೀ ದಿನ ಕಳೆಯಲು ನಿಮಗೆ ಶಕ್ತಿ ಇರುತ್ತದೆ” ಎಂದು ದೀಪ್ಸಿಖಾ ಹೇಳಿದ್ದಾರೆ.
ನಂತರ ತಮ್ಮ ಪೋಸ್ಟ್ನಲ್ಲಿ ಅವರು ಬೆಳಗ್ಗೆ ಎಚ್ಚರವಾದ ಮೇಲೆ ಮೊದಲ ಎರಡು ಗಂಟೆಗಳನ್ನು ಹೇಗೆ ಕಳೆಯುವುದು ಎಂದು ವಿವರಿಸಿದ್ದಾರೆ. ಎಚ್ಚರಗೊಳ್ಳುವ ಸಮಯ ಸ್ಥಿರವಾಗಿಡುವುದು, ನೀರು ಕುಡಿಯುವುದು, ಸೂರ್ಯನ ಬೆಳಕಿಗೆ ಒಡ್ಡುವುದು ಮತ್ತು ವ್ಯಾಯಾಮದ ದಿನಚರಿಯನ್ನು ಅವರು ಸೂಚಿಸಿದ್ದಾರೆ.
ದೀಪ್ಸಿಖಾ ಹೇಳಿರುವ ಬೆಳಗಿನ ವೇಳಾಪಟ್ಟಿ ಹೀಗಿದೆ,
ಬೆಳಗ್ಗೆ 7:00: ಎಚ್ಚರವಾಗಿ. ನಿತ್ಯವೂ ಇದೇ ಸಮಯಕ್ಕೆ ಏಳುವುದನ್ನು ಖಚಿತಪಡಿಸಿಕೊಳ್ಳಿ.
ಬೆಳಗ್ಗೆ 7:10: ಸ್ವಲ್ಪ ನೀರು ಕುಡಿಯಿರಿ. ನೀರು ಕುಡಿಯುವುದರಿಂದ ನಿಮ್ಮ ದೇಹ ಮತ್ತು ಮೈಕ್ರೋಬ್ಗಳು ನಿಜವಾಗಿಯೂ ಎಚ್ಚರಗೊಳ್ಳಲು ನೆರವಾಗುತ್ತದೆ. ಮಾತ್ರವಲ್ಲದೆ ಕರುಳಿನ ಚಲನೆ ಮತ್ತು ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ.
ಬೆಳಗ್ಗೆ 7:15: ಇದು ಬೆಳಗಿನ ಬಹಳ ಶಕ್ತಿಯುತ ಸಮಯ. ಸೂರ್ಯನ ಅಡಿಯಲ್ಲಿ ಕುಳಿತಿರುವುದನ್ನು ಖಚಿತಪಡಿಸಿ. ಅದರಿಂದ ಕಾರ್ಟಿಸೋಲ್ ಮಟ್ಟ ಏರುತ್ತದೆ. ಇಡೀ ದಿನ ಕಳೆಯಲು ಹೆಚ್ಚು ಶಕ್ತಿ ಬಂದಿರುವ ಭಾವನೆ ಬರಲಿದೆ.
ಬೆಳಗ್ಗೆ 7:30: ನಂತರ ಕಾಫಿ ಕುಡಿಯುತ್ತೀರಿ. ಇದರಿಂದ ಉತ್ತಮ ಕಾರ್ಟಿಸಾಲ್ ಮಟ್ಟವನ್ನು ಕಾಪಾಡುತ್ತದೆ ಮತ್ತು ಸಂಪೂರ್ಣ ಎಚ್ಚರಗೊಳ್ಳಲು ನೆರವಾಗುತ್ತದೆ.
ಬೆಳಗ್ಗೆ 7:45: ಹೊರಾಂಗಣ ವ್ಯಾಯಾಮಕ್ಕೆ ಹೋಗಿ. ಬೆಳಗಿನ ವ್ಯಾಯಾಮ ಮತ್ತು ಚಲನೆ ಬಹಳ ಮುಖ್ಯವಾಗುತ್ತದೆ.
ಬೆಳಗ್ಗೆ 8:45: ಒಂದು ಗಂಟೆಯ ವ್ಯಾಯಾಮದ ಬಳಿಕ ನೀವು ಮನೆಗೆ ಮರಳಬಹುದು ಮತ್ತು ಉಸಿರಾಟದ ಕೆಲಸ ಮತ್ತು ಧ್ಯಾನ ಮಾಡಬಹುದು. ಇದರಿಂದ ನಿಮ್ಮ ನರವ್ಯೂಹದ ವ್ಯವಸ್ಥೆ ನಿಯಂತ್ರಣಕ್ಕೆ ಬರುತ್ತದೆ.
ಬೆಳಗ್ಗೆ 9:00: ನೀವು ಉಪಹಾರ ಸೇವಿಸುವಿರಿ. ಅದರಲ್ಲಿ ಸಾಧಾರಣ ಫೈಬರ್ ಮತ್ತು ಅಧಿಕ ಪ್ರೊಟೀನ್ ಅಂಶ ಇರಬೇಕು. ದೇಹದ ಸಕ್ಕರೆ ಪ್ರಮಾಣವನ್ನು ಸಮತೋಲನಗೊಳಿಸುವುದು ಮುಖ್ಯವಾಗುತ್ತದೆ. ವಾಸ್ತವದಲ್ಲಿ ಇಂತಹ ಆಹಾರದಿಂದ ದೇಹದಲ್ಲಿನ ಕೊಬ್ಬಿನಂಶವನ್ನೂ ನಿಯಂತ್ರಿಸಬಹುದು.
ಕೃಪೆ: hindustantimes.com







