Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಅಡುಗೆಗೆ ಮೊದಲು ಕೋಳಿ ಮಾಂಸ ತೊಳೆಯಬೇಕೇ?...

ಅಡುಗೆಗೆ ಮೊದಲು ಕೋಳಿ ಮಾಂಸ ತೊಳೆಯಬೇಕೇ? ಬೇಡವೇ?

ವಾರ್ತಾಭಾರತಿವಾರ್ತಾಭಾರತಿ4 Oct 2026 7:07 PM IST
share
ಅಡುಗೆಗೆ ಮೊದಲು ಕೋಳಿ ಮಾಂಸ ತೊಳೆಯಬೇಕೇ? ಬೇಡವೇ?

ದಿಲ್ಲಿ ಮೂಲದ ಹೃದ್ರೋಗ ತಜ್ಞ ಡಾ. ಅಲೋಕ್ ಚೋಪ್ರಾ ಪ್ರಕಾರ, ಕೋಳಿ ಮಾಂಸವನ್ನು ಸಿಂಕ್ ನಲ್ಲಿ ತೊಳೆಯುವ ಅಭ್ಯಾಸದಿಂದ ನಿಮ್ಮ ಅಡುಗೆಮನೆಯ ಕೌಂಟರ್ ಗಳು, ಪಾತ್ರೆಗಳು ಮತ್ತು ಸುತ್ತಮುತ್ತಲಿನ ಆಹಾರ ಕಲುಷಿತವಾಗಬಹುದು.

ಮನೆಗೆ ತಂದ ಕೋಳಿ ಮಾಂಸವನ್ನು ನಲ್ಲಿಯ ನೀರಿನಡಿ ತೊಳೆಯುವುದು ಸಾಮಾನ್ಯ ಭಾರತೀಯ ಮನೆಗಳಲ್ಲಿ ಕಂಡುಬರುವ ಅಭ್ಯಾಸವಾಗಿದೆ. ತಲೆಮಾರುಗಳಿಂದ ಅನೇಕರು ಅಡುಗೆ ಮಾಡುವ ಮೊದಲು ಹಸಿ ಕೋಳಿ ಮಾಂಸ ತೊಳೆಯುವುದು ನೈರ್ಮಲ್ಯಕ್ಕೆ ಅತ್ಯಗತ್ಯ ಎಂದು ತಿಳಿದಿದ್ದೇವೆ. ಆದರೆ ದಿಲ್ಲಿ ಮೂಲದ ಹೃದ್ರೋಗ ತಜ್ಞ ಡಾ. ಅಲೋಕ್ ಚೋಪ್ರಾ ಪ್ರಕಾರ, ಈ ಅಭ್ಯಾಸದಿಂದ ನಿಮ್ಮ ಅಡುಗೆಮನೆಯ ಕೌಂಟರ್ ಗಳು, ಪಾತ್ರೆಗಳು ಮತ್ತು ಸುತ್ತಮುತ್ತಲಿನ ಆಹಾರ ಕಲುಷಿತವಾಗಬಹುದು.

ಸೆಪ್ಟೆಂಬರ್ 30ರಂದು ಇನ್ಸ್ಟಾಗ್ರಾಮ್ ನಲ್ಲಿ ಡಾ. ಚೋಪ್ರಾ ಒಂದು ಎಚ್ಚರಿಕೆ ನೀಡಿದ್ದಾರೆ. “ಅಡುಗೆ ಮಾಡುವ ಮೊದಲು ಇನ್ನೂ ಹಸಿ ಕೋಳಿ ಮಾಂಸವನ್ನು ತೊಳೆಯುತ್ತಿದ್ದೀರಾ? ಹಾಗೆ ಮಾಡುವುದರಿಂದ ನಿಮ್ಮ ಅಡುಗೆಮನೆಯ ಸುರಕ್ಷತೆ ಕಡಿಮೆಯಾಗಬಹುದು. ತೊಳೆಯುವುದರಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳು ಅಡುಗೆಮನೆಯಾದ್ಯಂತ ಹರಡಬಹುದು. ಕೋಳಿ ಮಾಂಸವನ್ನು ಸುರಕ್ಷಿತವಾಗಿಸುವುದು ಅದನ್ನು ಸರಿಯಾಗಿ ಬೇಯಿಸುವುದು, ತೊಳೆದಿಡುವುದಲ್ಲ” ಎಂದು ಅವರು ಹೇಳಿದ್ದಾರೆ.

ಅವರ ಪ್ರಕಾರ, ಹಸಿ ಕೋಳಿ ಮಾಂಸವು ಸಾಲ್ಮೋನೆಲ್ಲಾ ಮತ್ತು ಕ್ಯಾಂಪೈಲೋಬ್ಯಾಕ್ಟರ್ನಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊಂದಿರಬಹುದು. ಹೀಗಾಗಿ ಅವರು ಹಸಿ ಮಾಂಸದಲ್ಲಿ ಜೈವಿಕ ಅಪಾಯವನ್ನು ಗುರುತಿಸಿದ್ದಾರೆ. “ನೀವು ಹಸಿ ಕೋಳಿ ಮಾಂಸವನ್ನು ಹರಿಯುವ ನಲ್ಲಿಯ ನೀರಿನ ಅಡಿಯಲ್ಲಿ ಇರಿಸಿದಾಗ, ವಾಸ್ತವದಲ್ಲಿ ಸೂಕ್ಷ್ಮಜೀವಿಗಳನ್ನು ತೊಳೆದು ಹಾಕುತ್ತಿರುವುದಿಲ್ಲ” ಎಂದು ಅಲೋಕ್ ಚೋಪ್ರಾ ಹೇಳಿದ್ದಾರೆ.

ಮಾನವನ ಕಣ್ಣಿಗೆ ನೀರು ಚರಂಡಿಗೆ ಹರಿಯುವುದು ಮಾತ್ರ ಕಂಡರೂ, ದ್ರವದ ಚಲನಶೀಲತೆಯ ವಿಜ್ಞಾನವು (fluid dynamics) ಸಂಪೂರ್ಣ ಭಿನ್ನವಾದ ವಿಷಯವನ್ನು ಹೇಳುತ್ತದೆ. ಮಾಂಸದ ನಯವಾದ ಮೇಲ್ಮೈಯಿಂದ ನೀರಿನ ಹನಿಗಳು ಚಿಮ್ಮಿ ಸೂಕ್ಷ್ಮವಾದ ಹನಿಗಳಾಗಿ ಪರಿವರ್ತನೆಗೊಳ್ಳುತ್ತವೆ. ಹೀಗಾಗಿ ಹರಿಯುವ ನೀರಿನಲ್ಲಿ ಕೋಳಿ ಮಾಂಸವನ್ನು ತೊಳೆಯುವುದರಿಂದ ಕಲುಷಿತ ನೀರಿನ ಹನಿಗಳು ಸಿಂಕ್, ಅಡುಗೆ ಕೋಣೆಯ ಇತರ ಭಾಗಗಳು, ಪಾತ್ರೆಗಳು ಮತ್ತು ಇತರ ಆಹಾರ ಪದಾರ್ಥಗಳ ಮೇಲೆ ಚಿಮ್ಮಬಹುದು.

ಅಡುಗೆಮನೆಯ ಸಿಂಕ್ ಬಳಿ ಸಾಮಾನ್ಯವಾಗಿ ತೊಳೆದಿಟ್ಟ ಹಣ್ಣುಗಳು, ಒಣಗುವ ಟವೆಲ್ ಗಳು, ಸ್ವಚ್ಛವಾದ ಚಮಚಗಳು ಅಥವಾ ತೆರೆದ ಬಟ್ಟಲಿನಲ್ಲಿರುವ ಸಲಾಡ್ ಹೀಗೆ ನಾನಾ ವಸ್ತುಗಳು ಇರಬಹುದು. ಹೀಗಾಗಿ ಸಾಲ್ಮೊನೆಲ್ಲಾವನ್ನು ಹೊತ್ತಿರುವ ಸೂಕ್ಷ್ಮ ನೀರಿನ ಹನಿಗಳು ಸಾಮಾನ್ಯ ಅಡುಗೆಮನೆಯ ಕೌಂಟರ್ ಅನ್ನು ಆಹಾರ ಸುರಕ್ಷತೆಯ ಅಪಾಯದ ತಾಣವಾಗಿ ಪರಿವರ್ತಿಸಬಹುದು.

ನೀರಿನಿಂದ ಸ್ವಚ್ಛಗೊಳಿಸಲು ಸಾಧ್ಯವಾಗದೆ ಇದ್ದರೆ, ಮಾಂಸವನ್ನು ಹೇಗೆ ಸ್ವಚ್ಛಗೊಳಿಸಬಹುದು? “ಹರಿಯುವ ನೀರು, ವಿನೆಗರ್ ಅಥವಾ ನಿಂಬೆ ರಸ ಯಾವುದೂ ಹಸಿ ಮಾಂಸವನ್ನು ಹೆಚ್ಚಿನ ಶಾಖದಷ್ಟು ಪರಿಣಾಮಕಾರಿಯಾಗಿ ಶುದ್ಧೀಕರಿಸಲಾರದು. ಹೀಗಾಗಿ ಶಾಖವೇ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ತೊಳೆದು ಪ್ರಯೋಜನವಿಲ್ಲ” ಎನ್ನುತ್ತಾರೆ ಅಲೋಕ್ ಚೋಪ್ರಾ.

ಕೋಳಿ ಮಾಂಸದ ಸಂಪೂರ್ಣ ಸುರಕ್ಷತೆ ಖಚಿತಪಡಿಸಿಕೊಳ್ಳಲು ಪ್ರತಿಯೊಬ್ಬ ಅಡುಗೆಯವರು ಅನುಸರಿಸಬೇಕಾದ ನಿಖರವಾದ ವಿಧಾನವನ್ನು ಡಾ. ಅಲೋಕ್ ಚೋಪ್ರಾ ವಿವರಿಸಿದ್ದಾರೆ. “ಕೋಳಿಯನ್ನು 165°F (ಸುಮಾರು 74°C) ಆಂತರಿಕ ತಾಪಮಾನಕ್ಕೆ ಬೇಯಿಸಿ. ಈ ತಾಪಮಾನವು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಕೋಳಿ ತಿನ್ನಲು ಸುರಕ್ಷಿತವಾಗಿರುತ್ತದೆ.”

ಕೋಳಿಯನ್ನು ಸುರಕ್ಷಿತವಾಗಿ ನಿಭಾಯಿಸುವುದು

“ಮೊದಲಿಗೆ ಅಭ್ಯಾಸವನ್ನು ಮುರಿಯುವುದು ಅನನುಕೂಲವೆನಿಸಬಹುದು. ಆದರೆ ನಿಮ್ಮ ದಿನಚರಿ ಸರಿಹೊಂದಿಸುವುದು ಆಶ್ಚರ್ಯಕರವಾಗಿ ಸುಲಭ. ಸಿಂಕ್ ಬಿಟ್ಟುಬಿಡಿ, ನೇರವಾಗಿ ಪ್ಯಾನ್ ಗೆ ಹೋಗಿ” ಎನ್ನುತ್ತಾರೆ ವೈದ್ಯರು.

ಅಡುಗೆಗೆ ಸಿದ್ಧತೆ ನಡೆಸುವ ಪ್ರಕ್ರಿಯೆಯನ್ನು ಸ್ವಚ್ಛವಾಗಿ, ಸುರಕ್ಷಿತವಾಗಿ ಮತ್ತು ಯಾವುದೇ ಸಮಸ್ಯೆ ಇಲ್ಲದ ರೀತಿಯಲ್ಲಿ ಇರಿಸಿಕೊಳ್ಳಲು ಅವರು ತಮ್ಮ ಪೋಸ್ಟ್ ನಲ್ಲಿ ಶಿಫಾರಸು ಮಾಡಿರುವ ಹಂತ-ಹಂತದ ವಿಧಾನ ಇಲ್ಲಿದೆ:

1. ಕೋಳಿ ಮಾಂಸವನ್ನು ಪ್ಯಾಕೇಜ್ನಿಂದ ನೇರವಾಗಿ ಪ್ಯಾನ್ ಗೆ ವರ್ಗಾಯಿಸಿ. ತೊಳೆಯುವ ಅಗತ್ಯವಿಲ್ಲ. ಹೆಚ್ಚು ತೇವಾಂಶವಿದ್ದರೆ, ಒಣ ಪೇಪರ್ ಟವೆಲ್ ನಿಂದ ನಿಧಾನವಾಗಿ ಒರೆಸಿ. ನಂತರ ಟವೆಲ್ ಅನ್ನು ತಕ್ಷಣವೇ ಕಸದ ಬುಟ್ಟಿಗೆ ಹಾಕಿ.

2. ಹಸಿ ಮಾಂಸ ಸ್ಪರ್ಶಿಸಿದ ನಂತರ ಅಡುಗೆಮನೆಯಲ್ಲಿ ಬೇರೆ ಯಾವುದನ್ನಾದರೂ ಮುಟ್ಟುವ ಮೊದಲು ಕೈಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಹಸಿ ಕೋಳಿ ಮಾಂಸ ತಗಲಿದ ಮೇಲ್ಮೈಗಳನ್ನು ಸ್ವಚ್ಛಗೊಳಿಸಿ. ಹಸಿ ಮಾಂಸಕ್ಕಾಗಿ ಪ್ರತ್ಯೇಕ ಕತ್ತರಿಸುವ ಹಲಗೆಗಳನ್ನು ಬಳಸಿ. ಬಳಕೆಯ ನಂತರ ಅಡುಗೆಮನೆಯ ಸಂಬಂಧಿಸಿದ ಸ್ಥಳಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ.

ಅಡುಗೆಗೆ ಸಂಬಂಧಿಸಿದ ಹಳೆಯ ಪದ್ಧತಿಗಳನ್ನು ಬದಲಿಸುವುದು ಕಷ್ಟವಾಗಬಹುದು. ಆದರೆ ಆಹಾರದ ಮೂಲಕ ಹರಡುವ ರೋಗಕಾರಕಗಳ ವಿಷಯಕ್ಕೆ ಬಂದರೆ, ಸಿಂಕ್ ನಲ್ಲಿ ಮಾಂಸ ತೊಳೆಯುವ ಅಭ್ಯಾಸ ಬಿಡುವುದು ಆರೋಗ್ಯಕ್ಕಾಗಿ ನೀವು ಮಾಡಬಹುದಾದ ಅತ್ಯಂತ ಸರಳ ಮತ್ತು ಉತ್ತಮ ಬದಲಾವಣೆ ಎನ್ನುತ್ತಾರೆ ವೈದ್ಯರು.

Tags

chicken
share
ವಾರ್ತಾಭಾರತಿ
ವಾರ್ತಾಭಾರತಿ
Next Story
X