ನಿತ್ಯವೂ ಓಟ್ಸ್ ಸೇವಿಸಿದರೆ ಏನಾಗುತ್ತದೆ? ವೈದ್ಯರು ತಿಳಿಸಿದ ಐದು ಪ್ರಯೋಜನಗಳು ಇಲ್ಲಿವೆ...

Photo Credit : magnific
ಡಾ. ಸೌರಭ್ ಸೇಥಿ ಅವರು ಪೋಸ್ಟ್ ಮಾಡಿದ ಇನ್ಸ್ಟಾಗ್ರಾಮ್ ವೀಡಿಯೋದಲ್ಲಿ ಒಬ್ಬ ವ್ಯಕ್ತಿಯು ಪ್ರತಿದಿನ ಓಟ್ಸ್ ಸೇವಿಸಿದರೆ ದೇಹದ ಆರೋಗ್ಯದಲ್ಲಿ ಏನಾಗಬಹುದು ಎಂಬುದನ್ನು ವಿವರಿಸಿದ್ದಾರೆ.
ಓಟ್ಸ್ ಸಾಮಾನ್ಯವಾಗಿ ಸರಳ ಉಪಹಾರ ಆಯ್ಕೆಯಾಗಿರುತ್ತದೆ. ಆದರೆ ಅವುಗಳನ್ನು ನಿಯಮಿತವಾಗಿ ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳು ಸಿಗಬಹುದು. ಏಮ್ಸ್ ಮತ್ತು ಹಾರ್ವರ್ಡ್ ತರಬೇತಿಪಡೆದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಅವರ ಪ್ರಕಾರ, ಓಟ್ಸ್ ಅನ್ನು ನಿಮ್ಮ ದೈನಂದಿನ ಆಹಾರದ ಭಾಗವಾಗಿಸುವುದರಿಂದ ಹೃದಯದ ಆರೋಗ್ಯ ಮತ್ತು ರಕ್ತದಲ್ಲಿನ ಸಕ್ಕರೆಯಿಂದ ಹಿಡಿದು ಜೀರ್ಣಕ್ರಿಯೆ ಮತ್ತು ಹಸಿವಿನವರೆಗೆ ಎಲ್ಲದರ ಮೇಲೆ ಪರಿಣಾಮ ಬೀರಬಹುದು. ಬೀಟಾ-ಗ್ಲುಕನ್ ಮತ್ತು ದೇಹದಲ್ಲಿನ ವಿವಿಧ ಕಾರ್ಯಗಳನ್ನು ಬೆಂಬಲಿಸುವ ಇತರ ಫೈಬರ್ ಗಳು ಸೇರಿದಂತೆ ಓಟ್ಸ್ ನಲ್ಲಿ ಕಂಡುಬರುವ ಫೈಬರ್ ನಿಂದ ಹೆಚ್ಚಿನ ಪ್ರಯೋಜನಗಳು ಲಭಿಸಲಿವೆ.
ಡಾ ಸೌರಭ್ ಸೇಥಿ ಅವರು ಪೋಸ್ಟ್ ಮಾಡಿದ ಇನ್ಸ್ಟಾಗ್ರಾಮ್ ವೀಡಿಯೋದಲ್ಲಿ ಒಬ್ಬ ವ್ಯಕ್ತಿಯು ಪ್ರತಿದಿನ ಓಟ್ಸ್ ಸೇವಿಸಿದಾಗ ಏನಾಗಬಹುದು ಎಂಬುದನ್ನು ವಿವರಿಸಿದ್ದಾರೆ. ಕೆಟ್ಟ ಕೊಲೆಸ್ಟರಾಲ್ ಅನ್ನು ನಿರ್ವಹಿಸಲು ಸಹಾಯ ಮಾಡುವುದು, ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ಕಡಿಮೆ ಮಾಡುವುದು, ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯಾವನ್ನು ಬೆಂಬಲಿಸುವುದು, ನಿಮ್ಮನ್ನು ಹೆಚ್ಚು ಕಾಲ ಹೊಟ್ಟೆ ತುಂಬಿದಂತೆ ಇಡುವುದು ಮತ್ತು ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುವುದು ಸೇರಿದಂತೆ ಐದು ಸಂಭಾವ್ಯ ಉಪಯೋಗವನ್ನು ಮುಖ್ಯವಾಗಿ ಅವರು ತಿಳಿಸಿದ್ದಾರೆ. ಓಟ್ಸ್ ಸಾಮಾನ್ಯ ಆಹಾರವೆಂದು ಕಂಡುಬಂದರೂ ಅವುಗಳ ನಾರಿನ ಅಂಶವು ಸಮತೋಲಿತ ಆಹಾರಕ್ಕೆ ಉಪಯುಕ್ತ ಸೇರ್ಪಡೆಯಾಗಬಹುದು.
ಹೃದಯದ ಆರೋಗ್ಯಕ್ಕೆ ಸಹಕಾರಿ:
ಸೌರಭ್ ಸೇಥಿ ಹೇಳಿರುವ ಪ್ರಮುಖ ಪ್ರಯೋಜನಗಳಲ್ಲಿ ಒಂದು ಹೃದಯದ ಆರೋಗ್ಯ. ಓಟ್ಸ್ ನಲ್ಲಿ ಕರಗುವ ಫೈಬರ್ ಆಗಿರುವ ಬೀಟಾ-ಗ್ಲುಕನ್ ಇರುತ್ತದೆ. ಡಾ ಸೇಥಿ ಅವರ ಪ್ರಕಾರ ಈ ಫೈಬರ್ ಸಾಮಾನ್ಯವಾಗಿ ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯಲಾಗುವ ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಓಟ್ಸ್ ಅನ್ನು ನಿಯಮಿತವಾಗಿ ಸೇರಿಕೊಳ್ಳುವುದು ಆಹಾರದಲ್ಲಿ ಹೆಚ್ಚು ಕರಗುವ ಫೈಬರ್ ಅನ್ನು ಸೇರಿಸುವ ಮಾರ್ಗವಾಗಿದೆ.
ರಕ್ತದಲ್ಲಿನ ಸಕ್ಕರೆಯ ಮೇಲೂ ಪರಿಣಾಮ:
ಓಟ್ಸ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮೇಲೂ ಪರಿಣಾಮ ಬೀರಬಹುದು. ಫೈಬರ್ ಗ್ಲುಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ ಎಂದು ಸೇಥಿ ಹೇಳಿದ್ದಾರೆ. ಗ್ಲುಕೋಸ್ ರಕ್ತಪ್ರವಾಹಕ್ಕೆ ನಿಧಾನವಾಗಿ ಪ್ರವೇಶಿಸಿದಾಗ, ತಿಂದ ನಂತರ ರಕ್ತದಲ್ಲಿನ ಸಕ್ಕರೆ ಕಡಿಮೆ ಸಮಸ್ಯೆಯು ಸಮತೋಲನಕ್ಕೆ ಬರಬಹುದು. ಓಟ್ಸ್ ನಲ್ಲಿರುವ ಫೈಬರ್ ಅಂಶವು ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟಗಳ ಬಗ್ಗೆ ಗಮನಹರಿಸುವ ಜನರಿಗೆ ಓಟ್ಸ್ ನ ಫೈಬರ್ ಅಂಶವು ಉಪಯುಕ್ತವಾಗಿರುತ್ತದೆ.
ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಕ್ಕೆ ಬೆಂಬಲ:
ಜೀರ್ಣದ ಆರೋಗ್ಯದಲ್ಲಿ ಪ್ರಮುಖ ಪಾತ್ರವಹಿಸುವ ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯವನ್ನು ಬೆಂಬಲಿಸುತ್ತದೆ. ಓಟ್ಸ್ ಪ್ರಿಯಾಟಿಕ್ ಫೈಬರ್ಗಳನ್ನು ಹೊಂದಿರುತ್ತದೆ. ಇದು ಈ ಪ್ರಯೋಜನಕಾರಿ ಕರುಳಿನ ಬ್ಯಾಕ್ಟೀರಿಯವನ್ನು ಪೋಷಿಸಲು ಸಹಾಯ ಮಾಡುತ್ತದೆ. ಓಟ್ಸ್ ನಿಯಮಿತವಾಗಿ ತಿನ್ನುವುದರಿಂದ ಆಗುವ ಮತ್ತೊಂದು ಸಂಭಾವ್ಯ ಪ್ರಯೋಜನವಿದು. ಪ್ರಿಬಯಾಟಿಕ್ ನಾರುಗಳು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳಿಗೆ ಪೋಷಣೆ ಒದಗಿಸುತ್ತದೆ. ಹೀಗೆ ಕರುಳಿನ ಪರಿಸರ ಹೆಚ್ಚು ಆರೋಗ್ಯಕರವಾಗಿರಬಹುದು.
ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ:
ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡಲು ಓಟ್ಸ್ ಸಹಾಯ ಮಾಡಬಹುದು. ಹಗಲಿನಲ್ಲಿ ಅನಗತ್ಯ ತಿಂಡಿಗಳನ್ನು ಕಡಿಮೆ ಮಾಡಬಹುದು. ಊಟದ ನಂತರ ತೃಪ್ತಿ ಅನುಭವಿಸುವುದರಿಂದ ತಿಂದ ಕೂಡಲೇ ಮತ್ತೆ ಹಸಿವಾಗುತ್ತದೆ ಎಂಬ ಕಾರಣಕ್ಕೆ ಆಹಾರ ಹುಡುಕುವುದನ್ನು ತಪ್ಪಿಸಬಹುದು. ಓಟ್ಸ್ ನಲ್ಲಿರುವ ಫೈಬರ್ ಅಂಶವು ಹೊಟ್ಟೆ ತುಂಬಿದ ಅನುಭವ ಕೊಡುತ್ತದೆ. ತಿನ್ನುವ ದಿನಚರಿ ಕಾಪಾಡಿಕೊಳ್ಳಲು ಪ್ರಯತ್ನಿಸುವವರಿಗೆ ಇದು ಉಪಯುಕ್ತವಾಗಬಹುದು.
ಕರುಳಿನ ಚಲನೆಗೆ ಸಹಾಯ:
ಡಾ. ಸೌರಭ್ ಸೇಥಿ ಗಮನಸೆಳೆದ ಮತ್ತೊಂದು ಪ್ರಯೋಜನವೆಂದರೆ ಕರುಳಿನ ಚಲನೆ. ಓಟ್ ಫೈಬರ್ ನಿಯಮಿತತೆಯನ್ನು ಬೆಂಬಲಿಸುತ್ತದೆ ಮತ್ತು ಆರೋಗ್ಯಕರ ಮಲ ಸ್ಥಿರತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಾಮಾನ್ಯ ಕರುಳಿನ ಕಾರ್ಯಕ್ಕೆ ಸಾಕಷ್ಟು ಫೈಬರ್ ಅಗತ್ಯವಿದೆ ಮತ್ತು ಓಟ್ಸ್ ದೈನಂದಿನ ಫೈಬರ್ ಸೇವೆಗೆ ಕೊಡುಗೆ ನೀಡುತ್ತದೆ. ಫೈಬರ್-ಭರಿತ ಆಹಾರಗಳನ್ನು ನಿಯಮಿತವಾಗಿ ಸೇರಿಸುವುದರಿಂದ ಸುಗಮ ಮತ್ತು ಸ್ಥಿರವಾದ ಕರುಳಿನ ಅಭ್ಯಾಸ ಬೆಂಬಲಿಸಲು ಸಹಾಯ ಮಾಡುತ್ತದೆ.
ಹೀಗಾಗಿ ಡಾ. ಸೇಥಿ ಅವರು ಎತ್ತಿ ತೋರಿಸುವ ಐದು ಪ್ರಯೋಜನಗಳು ಓಟ್ಸ್ ನಲ್ಲಿ ನೈಸರ್ಗಿಕವಾಗಿ ಇರುವ ಫೈಬರ್ ಗೆ ಹೆಚ್ಚಾಗಿ ಸಂಬಂಧಿಸಿವೆ.
ಸೂಚನೆ: ಈ ಲೇಖನವನ್ನು ಸಾಮಾಜಿಕ ಜಾಲತಾಣಗಳಿಂದ ಪಡೆದು ಮಾಹಿತಿ ನೀಡುವ ಉದ್ದೇಶದಿಂದ ಬರೆಯಲಾಗಿದೆ. ಯಾವುದೇ ವೈದ್ಯರ ಸಲಹೆಗೆ ಪರ್ಯಾಯವಲ್ಲ. ವೃತ್ತಿಪರ ವೈದ್ಯರ ಸಲಹೆಗಳಿಗೆ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.
ಕೃಪೆ: ndtv.com






