ಇಂದು ಮಹಾರಾಷ್ಟ್ರ ಸರಕಾರಕ್ಕೆ ಅಜಿತ್ ಪವಾರ್ , 9 ಎನ್ ಸಿಪಿ ಶಾಸಕರು ಸೇರ್ಪಡೆ ಸಾಧ್ಯತೆ

ಹೊಸದಿಲ್ಲಿ: ಅತ್ಯಂತ ಪ್ರಮುಖ ರಾಜಕೀಯ ಬೆಳವಣಿಗೆಯೊಂದರಲ್ಲಿ ಎನ್ ಸಿಪಿ ನಾಯಕ ಮತ್ತು ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ತನ್ನ ಪಕ್ಷದ 9 ಶಾಸಕರ ಬೆಂಬಲದೊಂದಿಗೆ
ಇಂದು ಮಹಾರಾಷ್ಟ್ರ ಸರಕಾರವನ್ನು ಸೇರುವ ನಿರೀಕ್ಷೆಯಿದೆ.
ಪವಾರ್ ಇಂದು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಉಪ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಯುವ ಇಚ್ಛೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಪವಾರ್ ಈ ಹೆಜ್ಜೆ ಇಟ್ಟಿದ್ದಾರೆ.
ಅಜಿತ್ ಪವಾರ್ ರವಿವಾರ ಎನ್ಸಿಪಿ ಶಾಸಕರ ತುರ್ತು ಸಭೆ ಕರೆದ ನಂತರ ಅವರು ರಾಜಭವನಕ್ಕೆ ಆಗಮಿಸಿದರು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಕೂಡ ರಾಜಭವನಕ್ಕೆ ಆಗಮಿಸಿದರು. ಛಗನ್ ಭುಜಬಲ್, ಧನಂಜಯ್ ಮುಂಡೆ ಹಾಗೂ ಇತರ ಎನ್ಸಿಪಿ ಶಾಸಕರು ರಾಜಭವನದಲ್ಲಿ ಇದ್ದಾರೆ
Next Story





