ಅಸ್ಸಾಂ ಸಿಎಂ ಕುಟುಂಬದ ಒಡೆತನದ ಕಂಪನಿಯ ಆಹಾರ ಸಂಸ್ಕರಣಾ ಘಟಕಕ್ಕೆ 10 ಕೋಟಿ ರೂ. ಸಬ್ಸಿಡಿ!
10 crore for a food processing unit of a company owned by the Assam CM's family. Subsidy!
ಹಿಮಂತ ಬಿಸ್ವಾ ಶರ್ಮಾ |Photo: PTI
ಅಸ್ಸಾಂ: ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಅಸ್ಸಾಂ ಸಿಎಂ ಕುಟುಂಬದ ಒಡೆತನದ ಮಾಧ್ಯಮ ಕಂಪನಿಯು 10 ಕೋಟಿ ರೂಪಾಯಿಗಳ ಸಬ್ಸಿಡಿ ಪಡೆದಿದೆ ಎಂದು newslaundry.com ವರದಿ ಮಾಡಿದೆ.
ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯವು ಪ್ರಧಾನ ಮಂತ್ರಿ ಕಿಸಾನ್ ಸಂಪದ್ ಯೋಜನೆಗಳ ಕೃಷಿ ಸಂಸ್ಕರಣಾ ಕ್ಲಸ್ಟರ್ ಕಾರ್ಯಕ್ರಮದಡಿ ಸಹಾಯಧನವನ್ನು ನೀಡಿದೆ. ನ್ಯೂಸ್‌ಲಾಂಡ್ರಿಯಲ್ಲಿ ಲಭ್ಯವಿರುವ ಮತ್ತು ಅಸ್ಸಾಮಿ ಸುದ್ದಿ ವೆಬ್‌ಸೈಟ್ ದಿ ಕ್ರಾಸ್ ಕರೆಂಟ್‌ನಿಂದ ಸೆಪ್ಟೆಂಬರ್ 10 ರಂದು ಪ್ರಕಟಿಸಲಾದ ದಾಖಲೆಗಳು ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ 25.88 ಕೋಟಿ ಮೌಲ್ಯದ ಯೋಜನೆಗೆ ನವೆಂಬರ್ 10 ರಂದು ಸಬ್ಸಿಡಿ ನೀಡಲಾಗಿದೆ ಎಂದು ಹೇಳಿದೆ.
ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕುಟುಂಬದ ಒಡೆತನದಲ್ಲಿದೆ. ಎರಡು ಸುದ್ದಿ ವಾಹಿನಿಗಳು, ಒಂದು ಪತ್ರಿಕೆ, ಡಿಜಿಟಲ್ ಪೋರ್ಟಲ್ ಮತ್ತು ಕನಿಷ್ಠ ಮೂರು ಮನರಂಜನಾ ಚಾನೆಲ್‌ಗಳನ್ನು ಹೊಂದಿರುವ ಈಶಾನ್ಯದ ಅತಿದೊಡ್ಡ ಮಾಧ್ಯಮ ಸಂಸ್ಥೆಗಳಲ್ಲಿ ಒಂದಾಗಿರುವ, ಈ ಕಂಪೆನಿಗೆ ಬಿಸ್ವಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ, ಅವರ ತಾಯಿ ಮೃಣಾಲಿನಿ ದೇವಿ, ಅವರ ಮಗ ನಂದಿಲ್ ಬಿಸ್ವಾ ಶರ್ಮಾ ಮತ್ತು ಅವರ ಮಗಳು ಸುಕನ್ಯಾ ಶರ್ಮಾ ಮಾಲಕತ್ವ ಹೊಂದಿದ್ದಾರೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಕಡತಗಳ ಪ್ರಕಾರ, ಕಂಪನಿಯು ತನ್ನ ವ್ಯಾಪಾರ ಆಸಕ್ತಿಗಳನ್ನು ರೇಷ್ಮೆ ಉತ್ಪಾದನೆ ಮತ್ತು ಆಹಾರ ಸಂಸ್ಕರಣೆಗೆ ವಿಸ್ತರಿಸಿದೆ.
ಶರ್ಮಾ ಅವರು "ನನ್ನ ಪತ್ನಿ ಅಥವಾ ಅವರು ಮಾಲಕತ್ವ ಹೊಂದಿರುವ ಕಂಪನಿಯು ಭಾರತ ಸರ್ಕಾರದಿಂದ ಯಾವುದೇ ಆರ್ಥಿಕ ಸಹಾಯಧನವನ್ನು ಪಡೆದಿಲ್ಲ" ಎಂದು ಹೇಳಿಕೊಂಡಿದ್ದಾರೆ.
ಕೂತೂಹಲಕಾರಿ ಘಟನೆಯಲ್ಲಿ ಕಳೆದ ವರ್ಷ ಫೆಬ್ರವರಿ 4 ರಂದು, ಪ್ರೈಡ್ ಈಸ್ಟ್ ಎಂಟರ್‌ಟೈನ್‌ಮೆಂಟ್ ಪ್ರಸ್ತಾವಿತ ಆಹಾರ ಸಂಸ್ಕರಣಾ ಘಟಕಕ್ಕಾಗಿ ನಾಗೋನ್‌ನ ಕಲಿಯಾಬೋರ್ ವೃತ್ತದ ದಾರಿ ಗೋಜಿ ಗ್ರಾಮದಲ್ಲಿ ಸುಮಾರು 50 ಬಿಗಾ (16.52 ಎಕರೆ) ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಈ ಎಲ್ಲಾ ಭೂಮಿ ಖರೀದಿಸುವ ಸಮಯದಲ್ಲಿ ಕೃಷಿ ಭೂಮಿ ಎಂದು ವರ್ಗೀಕರಿಸಲಾಗಿದೆ. ಅಸ್ಸಾಂ ಕಂದಾಯ ದಾಖಲೆಗಳ ವೆಬ್‌ಸೈಟ್‌ನಲ್ಲಿನ ದಾಖಲೆಗಳು ಏಪ್ರಿಲ್ 18, 2022 ರಂದು ಅನಿಲ್ ಬಿಶ್ವಾಸ್ ಅವರಿಂದ ಖರೀದಿಸಿದ 2 ಖಾತೆಯನ್ನು ಹೊರತುಪಡಿಸಿ - ಕೃಷಿಯಿಂದ ಉದ್ಯಮಕ್ಕೆ ಕನ್ವರ್ಷನ್ ಮಾಡಲಾಗಿದೆ. ನಂತರ 10 ಕೋಟಿ ರೂ.ಗಳ ಸಹಾಯಧನ ನೀಡುವಂತೆ ಕೋರಲಾಗಿದೆ.
ದಿ ಕ್ರಾಸ್ ಕರೆಂಟ್ ಈ ಬಗ್ಗೆ ವರದಿ ಮಾಡಿದ ನಂತರ, ಈ ಸಬ್ಸಿಡಿ ಘಟನೆ ವಿವಾದಕ್ಕೆ ನಾಂದಿಯಾಯಿತು. ಸೆಪ್ಟೆಂಬರ್ 12 ರಂದು ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಅಖಿಲ್ ಗೊಗೊಯ್ ಅವರು ಸಿಎಂ ಶರ್ಮಾ ಅವರಿಂದ ಉತ್ತರಕ್ಕೆ ಆಗ್ರಹಿಸಿದರು. ಅಸ್ಸಾಂ ಪ್ರದೇಶ ಕಾಂಗ್ರೆಸ್ ಕೂಡ ಈ ಬಗ್ಗೆ ತನಿಖೆಗೆ ಒತ್ತಾಯಿಸಿದೆ. ಶರ್ಮಾ ಅವರು "ರಾಜ್ಯದ ಜನರಿಗಾಗಿ ಕೆಲಸ ಮಾಡುವ ಬದಲಿಗೆ ತನ್ನ ಹೆಂಡತಿ ಮತ್ತು ಕುಟುಂಬಕ್ಕಾಗಿ ಕೆಲಸ ಮಾಡುತ್ತಿದ್ದಾರೆ " ಎಂದು ಪ್ರತಿಪಕ್ಷಗಳು ಆರೋಪಿಸಿವೆ.