×
Ad

ಕೇರಳದ 104 ಶಾಲೆಗಳು ಡ್ರಗ್ಸ್ ಹಾಟ್ ಸ್ಪಾಟ್‌ಗಳು ಎಂದು ಗುರುತಿಸಿದ ಅಬಕಾರಿ ಇಲಾಖೆ!

Update: 2025-05-31 15:35 IST

ಸಾಂದರ್ಭಿಕ ಚಿತ್ರ (PTI)

ತಿರುವನಂತಪುರಂ: ಇನ್ನೆರಡು ದಿನಗಳಲ್ಲಿ ಕೇರಳದಲ್ಲಿ ಶಾಲೆಗಳು ಪುನಾರಂಭಗೊಳ್ಳಲಿದೆ. ಈ ಮಧ್ಯೆ ರಾಜ್ಯದ 104 ಶಾಲೆಗಳು ಮಾದಕ ವಸ್ತುಗಳ ತಾಣಗಳೆಂದು ಎಂದು ರಾಜ್ಯ ಅಬಕಾರಿ ಇಲಾಖೆ ಗುರುತಿಸಿದೆ. ವಿದ್ಯಾರ್ಥಿಗಳನ್ನು ವ್ಯಸನ ಮುಕ್ತಗೊಳಿಸುವ ಕ್ರಮಗಳಿಗೆ ಚಾಲನೆ ನೀಡಿದೆ ಎಂದು newindianexpress.com ವರದಿ ಮಾಡಿದೆ.

ಈ ಶಾಲೆಗಳ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಮಾದಕ ದ್ರವ್ಯ ವ್ಯಸನದ ಕೇಂದ್ರ ಸ್ಥಳಗಳು ಎಂದು ರಾಜ್ಯ ಅಬಕಾರಿ ಇಲಾಖೆ ಎಚ್ಚರಿಸಿದೆ. ಇದರಲ್ಲಿ ಪ್ರೌಢಶಾಲೆ ಹಾಗೂ ಪದವಿಪೂರ್ವ ವರ್ಗದ ಸರಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಸೇರಿವೆ.

ಈ ಪಟ್ಟಿಯಲ್ಲಿ 43 ಶಾಲೆಗಳು ಕಾಣಿಸಿಕೊಳ್ಳುವ ಮೂಲಕ ತಿರುವನಂತಪುರಂ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಎರ್ನಾಕುಲಂ ಹಾಗೂ ಕೋಝಿಕ್ಕೋಡ್ ಜಿಲ್ಲೆಗಳಿವೆ ಎಂದು ಅಬಕಾರಿ ಇಲಾಖೆ ತಿಳಿಸಿದೆ.

ಮಾದಕ ದ್ರವ್ಯ ವ್ಯಸನದ ಕೇಂದ್ರ ಸ್ಥಳಗಳಾದ ಈ ಶಾಲೆಗಳ ಮೇಲೆ ರಾಜ್ಯ ಅಬಕಾರಿ ಇಲಾಖೆ ನಿಗಾ ವಹಿಸಲಿದೆ. ಅಗತ್ಯ ಬಿದ್ದರೆ ಪೊಲೀಸರ ನೆರವನ್ನೂ ಪಡೆಯಲಾಗುತ್ತದೆ ಎಂದು ಹೇಳಲಾಗಿದೆ.

ಇದಲ್ಲದೆ ಡ್ರಗ್ ಜಾಲಗಳ ಹಿಡಿತದಿಂದ ವಿದ್ಯಾರ್ಥಿಗಳನ್ನು ಮುಕ್ತಗೊಳಿಸಲು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಅಬಕಾರಿ ಇಲಾಖೆಗೆ ರಾಜ್ಯ ಸರಕಾರ ನಿರ್ದೇಶನ ನೀಡಿದೆ ಎಂದು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News