×
Ad

2026ರ ಆವೃತ್ತಿಯ ಫಿಫಾ ವಿಶ್ವಕಪ್ : ಅರ್ಹತೆಯ ಹಾದಿಯಲ್ಲಿ ಸೌದಿ ಅರೇಬಿಯ

Update: 2025-10-09 21:27 IST

Photo Credi : spl.com.sa

ರಿಯಾದ್, ಅ.9: ಇಂಡೋನೇಶ್ಯ ತಂಡವನ್ನು 3-2 ಗೋಲುಗಳ ಅಂತರದಿಂದ ರೋಚಕವಾಗಿ ಮಣಿಸಿರುವ ಸೌದಿ ಅರೇಬಿಯ ತಂಡ 2026ರ ಆವೃತ್ತಿಯ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವತ್ತ ಹೆಜ್ಜೆ ಇಟ್ಟಿದೆ.

ಜಿದ್ದಾದಲ್ಲಿ ಮುಂದಿನ ಮಂಗಳವಾರ ನಡೆಯಲಿರುವ ಇರಾಕ್ ವಿರುದ್ಧ ಪಂದ್ಯವನ್ನು ಜಯಿಸಿದರೆ ಸೌದಿ ಅರೇಬಿಯ ‘ಬಿ’ಗುಂಪಿನಲ್ಲಿ ತನ್ನ ಅಗ್ರ ಸ್ಥಾನ ಖಚಿತಪಡಿಸಲಿದ್ದು, ವಿಶ್ವಕಪ್ ಟೂರ್ನಿಯಲ್ಲಿ 7ನೇ ಬಾರಿ ಕಾಣಿಸಿಕೊಳ್ಳಲಿದೆ.

ಏಶ್ಯನ್ ಅರ್ಹತಾ ಟೂರ್ನಿಯ 4ನೇ ಸುತ್ತಿನಲ್ಲಿ ಎರಡು ಗುಂಪಿನ ವಿಜೇತ ತಂಡ ಪಂದ್ಯಾವಳಿಗೆ ಸ್ವಯಂ ಆಗಿ ಅರ್ಹತೆ ಪಡೆಯಲಿದೆ. ರನ್ನರ್ಸ್ ಅಪ್ ತಂಡ 5ನೇ ಸುತ್ತಿನಲ್ಲಿ ಮುಂದಿನ ಸುತ್ತಿಗೇರಲಿದೆ.

ನೆದರ್‌ಲ್ಯಾಂಡ್ಸ್‌ನ ಮಾಜಿ ಕೋಚ್ ಹಾಗೂ ಬಾರ್ಸಿಲೋನ ಸ್ಟ್ರೈಕರ್ ಪ್ಯಾಟ್ರಿಕ್ ಕ್ಲುವೆರ್ಟ್‌ರಿಂದ ತರಬೇತಿ ಪಡೆದಿರುವ ಇಂಡೋನೇಶ್ಯ ತಂಡವು 11ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲಾಗಿ ಪರಿವರ್ತಿಸಿತು. 6 ನಿಮಿಷಗಳ ನಂತರ ಸೌದಿ ಅರೇಬಿಯ ತಂಡ ಸ್ಕೋರನ್ನು ಸಮಬಲಗೊಳಿಸಿತು. 37ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿದ ಸೌದಿ ಅರೇಬಿಯ 2-1ರಿಂದ ಮುನ್ನಡೆ ಸಾಧಿಸಿತು.

ಸೌದಿ ಅರೇಬಿಯ 62ನೇ ನಿಮಿಷದಲ್ಲಿ ತನ್ನ ಮುನ್ನಡೆಯನ್ನು 3-1ಕ್ಕೆ ವಿಸ್ತರಿಸಿತು. 88ನೇ ನಿಮಿಷದಲ್ಲಿ ಇಂಡೋನೇಶ್ಯದ ಆಟಗಾರ ಡಿಕ್ಸ್ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಸೌದಿ ಅರೇಬಿಯಕ್ಕೆ ಆತಂಕ ಮೂಡಿಸಿದರು. ಈ ಮೂಲಕ ಡಿಕ್ಸ್ ಅವರು ಪಂದ್ಯದಲ್ಲಿ 2ನೇ ಗೋಲು ಗಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News