×
Ad

ಅರುಣಾಚಲಪ್ರದೇಶ: ಕಾಂಗ್ರೆಸ್, ಎನ್‌ಪಿಪಿಯ ತಲಾ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆ

Update: 2024-02-25 23:38 IST

 Photo: X/@PemaKhanduBJP

ಇಟಾನಗರ್: ಅರುಣಾಚಲಪ್ರದೇಶದಲ್ಲಿ ಕಾಂಗ್ರೆಸ್‌ನ ಇಬ್ಬರು ಶಾಸಕರು ಹಾಗೂ ನ್ಯಾಷನಲ್ ಪೀಪಲ್ಸ್ ಪಕ್ಷ (ಎನ್‌ಪಿಪಿ)ದ ಇಬ್ಬರು ಶಾಸಕರು ರವಿವಾರ ಆಡಳಿತಾರೂಢ ಬಿಜೆಪಿ ಸೇರಿದ್ದಾರೆ.

60 ಸದಸ್ಯರ ಅರುಣಾಚಲಪ್ರದೇಶ ವಿಧಾನ ಸಭೆಯಲ್ಲಿ ಕಾಂಗ್ರೆಸ್ ಹಾಗೂ ಎನ್‌ಪಿಪಿಯ ತಲಾ ಇಬ್ಬರು ಶಾಸಕರಿದ್ದಾರೆ.

ಕಾಂಗ್ರೆಸ್ ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ನಿನೋಂಗ್ ಎರಿಂಗ್, ವಾಂಗ್ಲಿನ್ ಲೋವಂಗ್ಡೋಂಗ್ ಹಾಗೂ ಎನ್‌ಪಿಪಿಯ ಮುಚ್ಚು ಮಿಥಿ, ಗೋಕರ್ ಬಸಾರ್ ಅವರು ಇಲ್ಲಿನ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷ ಸೇರಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿಯುರಮ್ ವಾಘೆ ಅವರು ಉಪಸ್ಥಿತರಿದ್ದರು.

ಈ ವರ್ಷಾಂತ್ಯದಲ್ಲಿ ಅರುಣಾಚಲ ಪ್ರದೇಶದಲ್ಲಿ ಲೋಕಸಭೆ ಹಾಗೂ ವಿಧಾನ ಸಭೆ ಚುನಾವಣೆ ಏಕಕಾಲದಲ್ಲಿ ನಡೆಯಲಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News