ದುಬೈಯಲ್ಲಿ ಸಿಲುಕಿದ ಜಾರ್ಖಂಡ್‌ನ ಕಾರ್ಮಿಕರು; ನೆರವು ನೀಡುವಂತೆ ವೀಡಿಯೊದಲ್ಲಿ ಕೋರಿಕೆ
Photo Credit : indianexpress.com
ರಾಂಚಿ: ಜಾರ್ಖಂಡ್‌ನ ಗಿರಿಡಿಹ, ಹಝಾರಿಬಾಗ್ ಹಾಗೂ ಬೊಕಾರೊ ಜಿಲ್ಲೆಗಳಿಂದ ಉದ್ಯೋಗಕ್ಕಾಗಿ ತೆರಳಿದ್ದ 14 ವಲಸೆ ಕಾರ್ಮಿಕರು ಕಳೆದ ಕೆಲವು ತಿಂಗಳುಗಳಿಂದ ದುಬೈಯಲ್ಲಿ ಸಿಲುಕಿಕೊಂಡಿದ್ದಾರೆ. ತಮ್ಮ ಕುಟುಂಬದ ಸದಸ್ಯರಿಗೆ ವೀಡಿಯೊ ಸಂದೇಶ ಕಳುಹಿಸಿರುವ ಅವರು, ಕೂಡಲೇ ನೆರವು ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಕೋರಿದ್ದಾರೆ.
ದುಬೈಯಲ್ಲಿ ಸಿಲುಕಿಕೊಂಡ ಕಾರ್ಮಿಕರು ವೀಡಿಯೊ ಸಂದೇಶದ ಮೂಲಕ ತಮ್ಮ ಸಂಕಷ್ಟಗಳನ್ನು ಹಂಚಿಕೊಡಿದ್ದಾರೆ ಹಾಗೂ ನೆರವು ನೀಡುವಂತೆ ಕೋರಿದ್ದಾರೆ. ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಕಾರ್ಯ ನಿರ್ವಹಿಸುತ್ತಿರುವ ಸಾಮಾಜಿಕ ಹೋರಾಟಗಾರ ಸಿಕಂದರ್ ಅಲಿ ಅವರಿಗೆ ಕೂಡ ಅವರು ವೀಡಿಯೊ ಕಳುಹಿಸಿದ್ದಾರೆ. ಅಲಿ ಅನಂತರ ಈ ವೀಡಿಯೊವನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.
ವೀಡಿಯೊ ಸಂದೇಶದಲ್ಲಿ ಕಾರ್ಮಿಕರು ತಮ್ಮನ್ನು ನೇಮಿಸಿಕೊಂಡ ಕಂಪೆನಿ ನಿಗದಿತ ಅವಧಿಗಿಂತ ಹೆಚ್ಚು ಸಮಯ ಕೆಲಸ ಮಾಡಲು ಒತ್ತಾಯಿಸುತ್ತಿದೆ. ತಮಗೆ ವೇತನ ಪಾವತಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಳೆದ ಮೂರು ತಿಂಗಳಿಂದ ವೇತನ ಪಾವತಿಸದೇ ಇರುವುದರಿಂದ, ಆಹಾರ, ವಸತಿ ಹಾಗೂ ಇತರ ಮೂಲಭೂತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರು ವೀಡಿಯೊದಲ್ಲಿ ಹೇಳಿದ್ದಾರೆ.