×
Ad

ಬಿಜೆಪಿ ನಾಯಕನಿಂದ ಗುಂಡು ಹಾರಿಸಿ ಮಹಿಳೆಯ ಹತ್ಯೆ

Update: 2023-06-26 22:54 IST

ಸಾಂದರ್ಭಿಕ ಚಿತ್ರ

ಜಬಲ್ಪುರ, ಜೂ. 26: ಮಧ್ಯಪ್ರದೇಶದ ಜಬಲ್ಪುರದಲ್ಲಿ ಬಿಜೆಪಿ ನಾಯಕ ಎನ್ನಲಾದ ವ್ಯಕ್ತಿಯಿಂದ ಗುಂಡಿನೇಟು ತಿಂದಿದ್ದ 26 ವರ್ಷದ ಮಹಿಳೆ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮಹಿಳೆಯು ಜೂನ್ 16ರಂದು ಆರೋಪಿಯನ್ನು ಭೇಟಿಯಾಗಲು ಅವನ ಕಚೇರಿಗೆ ಹೋಗಿದ್ದಾಗ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಯು ಬಿಜೆಪಿ ನಾಯಕನೆಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ, ಅದನ್ನು ಬಿಜೆಪಿ ಅಲ್ಲಗಳೆದಿತ್ತು.

ಗುಂಡೇಟಿಗೊಳಗಾದ ಮಹಿಳೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆರೋಪಿಯನ್ನು ಜೂನ್ 19ರಂದು ಬಂಧಿಸಲಾಗಿತ್ತು.

ಗುಂಡು ಆಕಸ್ಮಿಕವಾಗಿ ಸಿಡಿದಿತ್ತು ಎಂದು ಹೇಳುವ ಮೂಲಕ ಪೊಲೀಸರು ಆರಂಭದಲ್ಲಿ ತನಿಖೆಯ ದಾರಿಯನ್ನು ತಪ್ಪಿಸಲು ಯತ್ನಿಸಿದ್ದರು ಎಂದು ಮಧ್ಯಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೌರಭ್ ಶರ್ಮ ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಧ್ವನಿ ಎತ್ತಿದ ಬಳಿಕ, ಅಂದರೆ ಗಂಡು ಹಾರಾಟ ನಡೆದ ನಾಲ್ಕು ದಿನಗಳ ಬಳಿಕವಷ್ಟೇ ಪೊಲೀಸರು ಆರೋಪಿಯ ವಿರುದ್ಧ ಕೊಲೆಯತ್ನ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಅವರು ಬೆಟ್ಟು ಮಾಡಿದ್ದಾರೆ.

ಘಟನೆಯ ಬಗ್ಗೆ ಪತ್ರಕರ್ತರು ಕೇಳಿದಾಗ, ಸಂತ್ರಸ್ತೆಯು ಆರೋಪಿಯ ಹೆಸರನ್ನು ಹೇಳುವುದನ್ನು ತೋರಿಸುವ ಒಂದು ವೀಡಿಯೊ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News