×
Ad

ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕುಸಿದು ಬಿದ್ದು ಯುವ ವೈದ್ಯೆ ಮೃತ್ಯು

Update: 2023-08-16 23:30 IST

ಡಾ. ಅಕ್ಷಯಾ ಪವಾಸ್ಕರ್ | Photo credit : @thegoanonline \ Twitter

ಶಿರೋಡ : ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಯುವ ವೈದ್ಯಾಧಿಕಾರಿ ಡಾ. ಅಕ್ಷಯಾ ಪವಾಸ್ಕರ್(38) ಕುಸಿದು ಬಿದ್ದು ಮೃತಪಟ್ಟ ಘಟನೆ ಶಿರೋಡದ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್ಸಿ)ದಲ್ಲಿ ಬುಧವಾರ ಸಂಭವಿಸಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಸವಾಲುಗಳ ಸಂದರ್ಭ ಶಿರೋಡ ಕೋವಿಡ್ ಆಸ್ಪತ್ರೆಯಲ್ಲಿ ಡಾ. ಅಕ್ಷಯಾ ಅವರು ಬದ್ಧತೆ ಹಾಗೂ ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದ್ದರು.

‘‘ಕರ್ತವ್ಯದ ಸಂದರ್ಭ ಯುವ ವೈದ್ಯಾಧಿಕಾರಿ ಡಾ. ಅಕ್ಷಯಾ ಪವಾಸ್ಕರ್ ಅವರು ಕುಸಿದು ಮೃತಪಟ್ಟಿರುವ ಸುದ್ದಿ ತನಗೆ ಅತೀವ ದುಃಖ ಉಂಟು ಮಾಡಿದೆ’’ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ. ಅವರ ಸಾವಿನ ಹಿಂದಿನ ಕಾರಣಗಳನ್ನು ತಿಳಿಯಲು ತನಿಖೆ ನಡೆಸಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.

‘‘ನಾನು ಡಾ. ಅಕ್ಷಯಾ ಪವಾಸ್ಕರ್ ಅವರ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ನಾವು ಇಂದು ಉತ್ತಮ ವೈದ್ಯರೋರ್ವರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’’ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News