×
Ad

ಚೆನ್ನೈ ಪ್ರವಾಹ: ತಮಿಳು ನಟ ವಿಷ್ಣು ವಿಶಾಲ್‌ ಮನೆಯಲ್ಲಿ ಸಿಲುಕಿದ್ದ ಆಮಿರ್‌ ಖಾನ್‌ ರಕ್ಷಣೆ

Update: 2023-12-05 19:09 IST

Photo:X/@TheVishnuVishal

ಚೆನ್ನೈ: ಚಂಡಮಾರುತದಿಂದ ಸುರಿದ ಭಾರೀ ಮಳೆಯಿಂದಾಗಿ ಚೆನ್ನೈ ನಗರದಲ್ಲಿ ಪ್ರವಾಹ ಉಂಟಾಗಿದ್ದು, ತಮಿಳು ನಟ ವಿಷ್ಣು ವಿಶಾಲ್‌ ಅವರ ಮನೆಯಲ್ಲಿ ಸಿಲುಕಿದ್ದ ಬಾಲಿವುಡ್‌ ನಟ ಆಮಿರ್‌ ಖಾನ್‌ ಅವರನ್ನು ರಕ್ಷಿಸಲಾಗಿದೆ.

ನಟ ವಿಷ್ಣು ವಿಶಾಲ್, ಆಮಿರ್‌ ಖಾನ್‌ ಮತ್ತು ಇತರೆ ಪ್ರವಾಹ ಸಂತ್ರಸ್ತರನ್ನು ರಕ್ಷಣಾ ದೋಣಿಯಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುವ ಚಿತ್ರಗಳು ವೈರಲ್‌ ಆಗಿದೆ.

ಈ ಫೋಟೋಗಳನ್ನು ವಿಷ್ಣು ವಿಶಾಲ್ ಅವರು ʼಎಕ್ಸ್‌ʼನಲ್ಲಿ ಹಂಚಿಕೊಂಡಿದ್ದಾರೆ.

“ಪ್ರವಾಹದಲ್ಲಿ ಸಿಕ್ಕಿಬಿದ್ದ ನಮ್ಮಂತಹ ಜನರಿಗೆ ಸಹಾಯ ಮಾಡಿದ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಗೆ ಧನ್ಯವಾದಗಳು. ಕರಪಕ್ಕಂನಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಈಗಾಗಲೇ 3 ಬೋಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ ಪರೀಕ್ಷೆಯ ಸಮಯ ತಮಿಳುನಾಡು ಸರ್ಕಾರದಿಂದ ಉತ್ತಮ ಕೆಲಸ ಆಗಿದೆ. ಅವಿರತವಾಗಿ ಕೆಲಸ ಮಾಡುತ್ತಿರುವ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳು” ಎಂದು ವಿಷ್ಣು ವಿಶಾಲ್‌ ಬರೆದಿದ್ದಾರೆ.

ವಿದ್ಯುತ್ ಮತ್ತು ನೆಟ್‌ವರ್ಕ್ ಇಲ್ಲದೇ ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ಸಿಲುಕಿಕೊಂಡಿದ್ದನ್ನು ವಿಷ್ಣು ಈ ಹಿಂದೆ ಬಹಿರಂಗಪಡಿಸಿದ್ದರು.

ತಮ್ಮ ಮನೆಗೆ ನೀರು ನುಗ್ಗಿರುವುದನ್ನು ಬಹಿರಂಗಪಡಿಸಿದ್ದ ವಿಶಾಲ್‌, “ನನ್ನ ಮನೆಗೆ ನೀರು ನುಗ್ಗುತ್ತಿದೆ. ನಾನು ಸಹಾಯಕ್ಕಾಗಿ ಕರೆ ಮಾಡಿದ್ದೇನೆ. ವಿದ್ಯುತ್ ಇಲ್ಲ, ವೈಫೈ ಇಲ್ಲ, ಫೋನ್ ಸಿಗ್ನಲ್ ಇಲ್ಲ, ಏನೂ ಇಲ್ಲ. ಒಂದು ನಿರ್ದಿಷ್ಟ ಹಂತದಲ್ಲಿ ಟೆರೇಸ್‌ನಲ್ಲಿ ಮಾತ್ರ ನನಗೆ ಕೆಲವು ಸಿಗ್ನಲ್ ಸಿಗುತ್ತದೆ. ನನಗೆ ಮತ್ತು ಇಲ್ಲಿರುವ ಅನೇಕರಿಗೆ ಸ್ವಲ್ಪ ಸಹಾಯ ಸಿಗುತ್ತದೆ ಎಂದು ಆಶಿಸೋಣ” ಎಂದು ವಿಶಾಲ್‌ ಟ್ವೀಟ್‌ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News