ತಮಿಳುನಾಡಿನಲ್ಲಿ ನಟ ವಿಜಯ್ ರ್‍ಯಾಲಿಯಲ್ಲಿ ಕಾಲ್ತುಳಿತ ಶಂಕೆ; 9 ವರ್ಷದ ಮಗು ನಾಪತ್ತೆ
Update: 2025-09-27 20:29 IST
ನಟ ವಿಜಯ್ | PTI
ಚೆನ್ನೈ, ಸೆ. 27: ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ನಟ ವಿಜಯ್ ಅವರು ಕರೂರಿನಲ್ಲಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಶನಿವಾರ ಗೊಂದಲ ಉಂಟಾಗಿ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಭಾರೀ ಜನಸ್ತೋಮ ನಿಯಂತ್ರಣ ತಪ್ಪಿದ ಪರಿಣಾಮ ಹಲವರು ಪ್ರಜ್ಞಾಹೀನರಾಗಿದ್ದು, ಒಂಭತ್ತು ವರ್ಷದ ಮಗು ನಾಪತ್ತೆಯಾದ್ದು ಆತಂಕಕ್ಕೆ ಕಾರಣವಾಗಿದೆ.
ವಿಜಯ್ ಅವರ ಜನಪ್ರಿಯತೆ ಹಿನ್ನೆಲೆಯಲ್ಲಿ ರ್‍ಯಾಲಿಗೆ ನಿರೀಕ್ಷೆಗೂ ಮೀರಿದ ಜನರು ಬಂದಿದ್ದರು. ಮೈದಾನದಲ್ಲಿ ಒತ್ತಾಟ, ತಳ್ಳಾಟ ಹೆಚ್ಚಾದ ಕ್ಷಣದಲ್ಲಿ ಕೆಲವರು ನೆಲಕ್ಕುರುಳಿದ್ದು, ಕಾಲ್ತುಳಿತದ ಭೀತಿ ಉಂಟಾಯಿತು. ಗೊಂದಲದ ನಡುವೆ ಕೆಲವರು ಉಸಿರುಗಟ್ಟಿಕೊಂಡು ಪ್ರಜ್ಞೆ ತಪ್ಪಿದರು. ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ತಿಳಿದು ಬಂದಿದೆ.