ತಮಿಳುನಾಡು | ನಟ ವಿಜಯ್ ರ‍್ಯಾಲಿಯಲ್ಲಿ ಅಪಘಾತ : ಪ್ರಚಾರ ವಾಹನದ ಚಾಲಕನ ವಿರುದ್ಧ ಎಫ್‌ಐಆರ್
Update: 2025-10-05 19:52 IST
ನಟ ವಿಜಯ್ | Photo Credit : PTI
ಕರೂರು, ಅ. 5: ನಟ-ರಾಜಕಾರಣಿ ವಿಜಯ್ ಅವರ ಪ್ರಚಾರ ವಾಹನದ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರೂರಿನಲ್ಲಿ ಸೆಪ್ಟಂಬರ್ 27ರಂದು ನಡೆದ ರ‍್ಯಾಲಿಯಲ್ಲಿ ಪಾಲ್ಗೊಂಡ ಈ ವಾಹನ ಅಪಘಾತಕ್ಕೀಡಾಗಿತ್ತು. ಇದೇ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದರು ಹಾಗೂ ಹಲವರು ಗಾಯಗೊಂಡಿದ್ದರು.
ಈ ಪ್ರಕರಣ ವಿಜಯ್ ಅವರನ್ನು ನೋಡಲು ಅಭಿಮಾನಿಗಳು ಪ್ರಚಾರ ಬಸ್‌ನ ಸಮೀಪದಲ್ಲಿ ಮೋಟಾರು ಸೈಕಲ್‌ಗಳಲ್ಲಿ ಹೋಗುತ್ತಿದ್ದಾಗ, ಪ್ರಚಾರ ವಾಹನ ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದೆ.
ಈ ಅಪಘಾತವನ್ನು ತೋರಿಸುವ ವೀಡಿಯೊಗಳನ್ನು ಹಲವು ಟಿ.ವಿ. ಚಾನೆಲ್‌ಗಳು ಪ್ರಸಾರ ಮಾಡಿದ್ದವು. ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ವ್ಯಪಾಕವಾಗಿ ಹಂಚಿಕೆಯಾಗಿತ್ತು.