×
Ad

ಭೀಕರ ಭೂಕಂಪದಿಂದ ತತ್ತರಿಸಿದ ಮ್ಯಾನ್ಮಾರ್ ನಲ್ಲಿ ಮತ್ತೆ 5.5 ತೀವ್ರತೆಯ ಭೂಕಂಪನ

Update: 2025-04-13 18:10 IST
PC : NDTV 

ನೇಪ್ಯಿಡಾವ್: ಕಳೆದ ತಿಂಗಳಷ್ಟೇ ಸಂಭವಿಸಿದ್ದ 7.7 ತೀವ್ರತೆಯ ಭೀಕರ ಭೂಕಂಪದ ನಂತರ, ರವಿವಾರ ಬೆಳಗ್ಗೆ ಕೂಡಾ ಕೇಂದ್ರ ಮ್ಯಾನ್ಮಾರ್ ನ ಮ್ಯಾಂಡಲೆ ಪ್ರಾಂತ್ಯದಲ್ಲಿನ ಸಣ್ಣ ನಗರವಾದ ಮೈಕ್ಟಿಲಾ ಬಳಿ 5.5 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಅಮೆರಿಕ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ವರದಿ ಮಾಡಿದೆ.

ಆದರೆ, ಈ ಘಟನೆಯಲ್ಲಿ ತಕ್ಷಣಕ್ಕೆ ಯಾವುದೇ ಗಮನಾರ್ಹ ಆಸ್ತಿಪಾಸ್ತಿ ಅಥವಾ ಜೀವ ಹಾನಿ ಸಂಭವಿಸಿಲ್ಲ ಎಂದು ಹೇಳಲಾಗಿದೆ.

ಮಾರ್ಚ್ 28ರಂದು ಮಧ್ಯ ಮ್ಯಾನ್ಮಾರ್ ಪ್ರಾಂತ್ಯದಲ್ಲಿ 7.7 ತೀವ್ರತೆಯ ಭೀಕರ ಭೂಕಂಪದಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು.

ರವಿವಾರ ಸಂಭವಿಸಿದ ಭೂಕಂಪನದ ಕೇಂದ್ರವು ಸರಿಸುಮಾರು ಮ್ಯಾಂಡಲೆ ಹಾಗೂ ಮ್ಯಾನ್ಮಾರ್ ರಾಜಧಾನಿಯಾದ ನೇಪ್ಯಿಟಾವ್ ನಡುವೆ ಇತ್ತು ಎಂದು ವರದಿಯಾಗಿದೆ.

Associated Press ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ವುಂಡ್ವಿನ್ ನಿವಾಸಿಗಳು, "ಇಂದು ಸಂಭವಿಸಿದ ಕಂಪನದಿಂದ ಭಯಭೀತಗೊಂಡ ಜನರು ತಮ್ಮ ಕಟ್ಟಡಗಳಿಂದ ಹೊರಗೋಡಿ ಬಂದರು ಹಾಗೂ ಕಂಪನದ ತೀವ್ರತೆಗೆ ಕೆಲವು ಕಟ್ಟಡಗಳೂ ಹಾನಿಗೊಳಗಾದವು" ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News