×
Ad

ಬಾಂಗ್ಲಾದೇಶದಿಂದ 34 ಬಂಗಾಳಿ ಮೀನುಗಾರರ ಬಂಧನ

Update: 2025-07-15 20:54 IST

ಸಾಂದರ್ಭಿಕ ಚಿತ್ರ

ಕೋಲ್ಕತಾ: ಪಶ್ಚಿಮ ಬಂಗಾಳದ 34 ಮೀನುಗಾರರನ್ನು ಬಾಂಗ್ಲಾದೇಶದ ಅಧಿಕಾರಿಗಳು ಸಮುದ್ರ ಗಡಿಯಲ್ಲಿ ಬಂಧಿಸಿದ್ದಾರೆ ಎಂದು ಅವರ ಒಕ್ಕೂಟವು ಮಂಗಳವಾರ ಹೇಳಿದೆ.

ಈ ಮೀನುಗಾರರು ನಮ್ಖಾನಾದಿಂದ ಎರಡು ಟ್ರಾಲರ್‌ ಗಳಲ್ಲಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದರು. ಅವರ ಬಂಧನದ ಕುರಿತು ದಕ್ಷಿಣ 24 ಪರಗಣಗಳ ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ ಎಂದು ಸುಂದರಬನ ಸಮುದ್ರಿಕ ಮತ್ಸ್ಯಜೀವಿ ಶ್ರಮಿಕ ಒಕ್ಕೂಟದ ಕಾರ್ಯದರ್ಶಿ ಸತಿನಾಥ ಪಾತ್ರಾ ತಿಳಿಸಿದರು.

ಎಫ್‌ಬಿ ಝಾರ್ ಮತ್ತು ಎಫ್‌ ಬಿ ಮಂಗಲಚಾಂದಿ ಹೆಸರಿನ ಎರಡು ಟ್ರಾಲರ್‌ ಗಳನ್ನು ಜು.13ರಂದು ಬಾಂಗ್ಲಾದೇಶದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ ಪಾತ್ರಾ,ಬಂಗಾಳ ಕೊಲ್ಲಿಯಲ್ಲಿನ ಸಮುದ್ರ ಗಡಿಯಲ್ಲಿ ಉಭಯ ದೇಶಗಳ ಮೀನುಗಾರರು ಅಕ್ಕಪಕ್ಕದಲ್ಲಿಯೇ ಮೀನುಗಾರಿಕೆಯನ್ನು ನಡೆಸುತ್ತಾರೆ ಎಂದು ತಿಳಿಸಿದರು.

‘ನಮ್ಮ ಸರಕಾರವು ಅವರನ್ನು ಮರಳಿ ಕರೆತರಲು ಅಗತ್ಯವಿರುವ ಎಲ್ಲವನ್ನೂ ಮಾಡುತ್ತದೆ ಎಂದು ನಾವು ಆಶಿಸಿದ್ದೇವೆ’ ಎಂದರು.

ಈ ಘಟನೆಯು ದೃಢಪಟ್ಟಿಲ್ಲ ಎಂದು ರಕ್ಷಣಾ ಅಧಿಕಾರಿಯೋರ್ವರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News