×
Ad

ಗೌರಿ ಲಂಕೇಶ್‌, ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದ ಆರೋಪಿಗಳ ವಕೀಲರನ್ನು ಸನ್ಮಾನಿಸಿದ ಬಿಜೆಪಿ ಶಾಸಕ ರಾಜಾ ಸಿಂಗ್

Update: 2024-07-02 14:50 IST

PC: thenewsminute.com

ಹೈದರಾಬಾದ್:‌ ಪತ್ರಕರ್ತೆ ಗೌರಿ ಲಂಕೇಶ್‌ ಹಾಗೂ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಅವರ ಹತ್ಯೆ ಆರೋಪಿಗಳ ಪರ ವಕೀಲರನ್ನು ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರು ಹಿಂದು ಜನಜಾಗೃತಿ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಸನ್ಮಾನಿಸಿದ್ದಾರೆ.

ಗೋವಾದಲ್ಲಿ ಜೂನ್‌ 24 ಹಾಗೂ 30ರ ನಡುವೆ ನಡೆದ ವೈಶವಿಕ್‌ ಹಿಂದು ರಾಷ್ಟ್ರ ಮಹೋತ್ಸವ್‌ ಕಾರ್ಯಕ್ರಮದಲ್ಲಿ ಈ ವಕೀಲರನ್ನು ರಾಜಾ ಸಿಂಗ್‌ ಸನ್ಮಾನಿಸಿದ್ದಾರೆ. ಸಿಂಗ್‌ ಸ್ವತಃ 101 ಪ್ರಕರಣಗಳನ್ನು ಎದುರಿಸುತ್ತಿದ್ದು ಅವುಗಳಲ್ಲಿ 18 ಮತೀಯ ಸ್ವರೂಪದ ಪ್ರಕರಣಗಳಾಗಿವೆ.

ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಗೌರಿ ಲಂಕೇಶ್‌ ಹತ್ಯೆಯ ಪ್ರಮುಖ ಆರೋಪಿ ಪರ ವಕೀಲರಾದ ಪಿ ಕೃಷ್ಣಮೂರ್ತಿ, ಉಮಾಶಂಕರ್‌ ಮೇಗುಂಡ, ದಿವ್ಯಾ ಮೇಗುಂಡಿ ಮತ್ತು ಅವಿನಾಶ್‌ ಮಸೂತಿ ಅವರನ್ನು ಸಿಂಗ್‌ ಸನ್ಮಾನಿಸಿದ್ದಾರೆ.

ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದ ಆರೋಪಿಗಳ ಪರ ವಕೀಲರಾದ ಪ್ರಕಾಶ್‌ ಸಲ್ಸಿಂಗ್‌ಕರ್‌, ಘನಶ್ಯಾಮ್‌ ಉಪಾಧ್ಯಾಯ, ಮೃಣಾಲ್‌ ವ್ಯವಹಾರೆ ಸಖರೆ ಮತ್ತು ಸ್ಮಿತಾ ದೇಸಾಯಿ ಅವರನ್ನೂ ಸಿಂಗ್‌ ಕಾರ್ಯಕ್ರಮದಲ್ಲಿ ಸನ್ಮಾನಿಸಿದ್ದಾರೆ.

ದೇಶಾದ್ಯಂತದಿಂದ ಬಂದ ಸುಮಾರು 800 ಪ್ರತಿನಿಧಿಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಸಮಿತಿ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News