ಜಮ್ಮು-ಕಾಶ್ಮೀರದ 4, ಪಂಜಾಬ್‌ನ 1 ರಾಜ್ಯ ಸಭಾ ಸ್ಥಾನಗಳಿಗೆ ಉಪ ಚುನಾವಣೆ : ಚುನಾವಣಾ ಆಯೋಗ ಘೋಷಣೆ
ಚುನಾವಣಾ ಆಯೋಗ | PTI
ಹೊಸದಿಲ್ಲಿ,ಸೆ. 24: ಜಮ್ಮು ಹಾಗೂ ಕಾಶ್ಮೀರದ 4 ಹಾಗೂ ಪಂಜಾಬ್‌ನ 1 ರಾಜ್ಯ ಸಭಾ ಸ್ಥಾನಗಳಿಗೆ ಉಪ ಚುನಾವಣೆಯನ್ನು ಭಾರತೀಯ ಚುನಾವಣಾ ಆಯೋಗ ಬುಧವಾರ ಘೋಷಿಸಿದೆ.
ಎಲ್ಲಾ 5 ಸ್ಥಾನಗಳಿಗೆ ಮತದಾನ ಹಾಗೂ ಮತ ಎಣಿಕೆ ಅಕ್ಟೋಬರ್ 24ರಂದು ನಡೆಯಲಿದೆ ಎಂದು ಅದು ತಿಳಿಸಿದೆ.
ಗುಲಾಂ ನಬಿ ಆಝಾದ್, ಮಿರ್ ಮುಹಮ್ಮದ್ ಫಯಾಝ್, ಶಂಶೀರ್ ಸಿಂಗ್ ಹಾಗೂ ನಝೀರ್ ಅಹ್ಮದ್ ಲಾವೇ ನಿವೃತ್ತರಾದ ಬಳಿಕ ಜಮ್ಮು ಹಾಗೂ ಕಾಶ್ಮೀರದ ಎಲ್ಲಾ 4 ರಾಜ್ಯ ಸಭಾ ಸ್ಥಾನಗಳು 2021ರ ಫೆಬ್ರವರಿಯಿಂದ ಖಾಲಿ ಬಿದಿದ್ದವು.
ಆಪ್ ಸಂಸದ ಸಂಜೀವ್ ಅರೋರಾ ಅವರು ತಮ್ಮ ಅವಧಿ ಪೂರ್ಣಗೊಳಿಸದೆ ಜುಲೈ 1ರಂದು ರಾಜೀನಾಮೆ ನೀಡಿದ ಬಳಿಕ ಪಂಜಾಬ್‌ನ 1 ರಾಜ್ಯ ಸಭಾ ಸ್ಥಾನ ಖಾಲಿ ಬಿದ್ದಿತ್ತು. ಅವರ ಅಧಿಕಾರಾವಧಿ 2028ರ ಎಪ್ರಿಲ್ 9ರಂದು ಪೂರ್ಣಗೊಳ್ಳಲಿತ್ತು.
ಎಲ್ಲಾ 5 ಸ್ಥಾನಗಳಿಗೆ ಅಕ್ಟೋಬರ್ 6ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 13. ನಾಮಪತ್ರಗಳ ಪರಿಶೀಲನೆ ಅಕ್ಟೋಬರ್ 14ರಂದು ನಡೆಯಲಿದೆ. ನಾಪಪತ್ರ ಹಿಂಪಡೆಯಲು ಕೊನೆಯ ದಿನಾಂಕ ಅಕ್ಟೋಬರ್ 16 ಎಂದು ಭಾರತೀಯ ಚುನಾವಣಾ ಆಯೋಗ ಹೇಳಿದೆ.
ಮತದಾನ ಅಕ್ಟೋಬರ್ 24ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ನಡುವೆ ನಡೆಯಲಿದೆ. ಮತ ಎಣಿಕೆ ಅದೇ ದಿನ ಸಂಜೆ 5 ಗಂಟೆಗೆ ಆರಂಭವಾಗಲಿದೆ.