ತಮಿಳುನಾಡು | ದಿಂಬಂ ಘಾಟ್‌ನಲ್ಲಿ ಕಂದಕಕ್ಕೆ ಉರುಳಿದ ಕಾರು; ಅಪಾಯದಿಂದ ಪಾರಾದ ಪ್ರಯಾಣಿಕರು
Update: 2025-11-30 15:08 IST
ಚಾಮರಾಜನಗರ : ಹಾಸನದಿಂದ ತಮಿಳುನಾಡಿನ ತಿರುಚ್ಚಿಗೆ ತೆರಳುತ್ತಿದ್ದ ಕಾರೊಂದು ಪಲ್ಟಿಯಾಗಿ ಕಂದಕಕ್ಕೆ ಉರುಳಿದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ದಿಂಬಂ ಘಾಟ್ ನಲ್ಲಿ ನಡೆದಿದೆ.
ಹಾಸನದಿಂದ ಆರು ಜನರು ಕಾರಿನಲ್ಲಿ ಚಾಮರಾಜನಗರ ಮೂಲಕ ತಮಿಳುನಾಡಿನ ತಿರುಚ್ಚಿಗೆ ಪ್ರಯಾಣ ಬೆಳಸಿದ್ದರು. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ದಿಂಬಂ ಘಾಟ್‌ನ ಮೊದಲ ಸುತ್ತಿನಲ್ಲಿ ಪಲ್ಟಿಯಾಗಿದೆ.
ಅದೃಷ್ಟವಷಾತ್ ಕಾರಿನಲ್ಲಿದ್ವವರಿಗೆ ಯಾವುದೇ ಪ್ರಾಣಪಾಯವಿದಲ್ಲದೆ, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ತಮಿಳುನಾಡು ಪೊಲೀಸರು ಆಗಮಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.