ತಮಿಳು ಸ್ಟಂಟ್ ಕಲಾವಿದನ ಮೃತ್ಯು | ನಿರ್ದೇಶಕ ಪಾ.ರಂಜಿತ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲು
Update: 2025-07-15 21:01 IST
PC : @beemji
ಚೆನ್ನೈ: ರವಿವಾರ ‘ವೆಟ್ಟುವನ್’ ಚಿತ್ರಕ್ಕಾಗಿ ಅಪಾಯಕಾರಿ ದೃಶ್ಯದ ಚಿತ್ರೀಕರಣ ಸಂದರ್ಭದಲ್ಲಿ ಸ್ಟಂಟ್ ಕಲಾವಿದ ಎಸ್.ಎಂ.ರಾಜು ಅವರ ಸಾವಿಗೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ಪಾ.ರಂಜಿತ್, ನೀಲಂ ಪ್ರೊಡಕ್ಷನ್ಸ್‌ನ ಕಾರ್ಯ ನಿರ್ವಾಹಕ ರಾಜಕಮಲ್,ಸ್ಟಂಟ್ ಕಲಾವಿದ ವಿನೋದ ಮತ್ತು ಚಿತ್ರೀಕರಣದಲ್ಲಿ ಬಳಸಲಾಗಿದ್ದ ಕಾರಿನ ಮಾಲಿಕ ಪ್ರಭಾಕರನ್ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರು ಬುಡಮೇಲಾಗಿ ಬೀಳುವ ದೃಶ್ಯದ ಚಿತ್ರೀಕರಣಕ್ಕಾಗಿ ರಾಜು ಅವರು ರ‍್ಯಾಂಪ್ ಮೇಲೆ ವೇಗವಾಗಿ ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದರು.