×
Ad

ಸಿಬಿಎಸ್‌ಇ ಶಾಲೆಗಳಲ್ಲಿ ಸಿಸಿಟಿವಿ ಕಡ್ಡಾಯ

Update: 2025-07-22 20:20 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಶಾಲಾ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷೆಯನ್ನು ಸುದೃಢಗೊಳಿಸಲು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಶಾಲೆಯ ಆವರಣದ ಪ್ರಮುಖ ಸ್ಥಳಗಳಲ್ಲಿ ಧ್ವನಿ ಸಹಿತ ದೃಶ್ಯ ದಾಖಲಿಸುವ ಹೈ ರೆಸಲ್ಯೂಷನ್ ಸಿಸಿಟಿವಿ ಕೆಮೆರಾಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.

ಈ ಹೊಸ ನಿರ್ದೇಶನ ಸಿಬಿಎಸ್‌ಇ ಸಂಯೋಜಿತ ಶಾಲೆಗಳಲ್ಲಿ ಶೌಚಾಲಯ ಹೊರತುಪಡಿಸಿ ತರಗತಿ ಕೊಠಡಿ, ಕಾರಿಡರ್, ಗ್ರಂಥಾಲಯ, ಮೆಟ್ಟಿಲುಗಳು ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕೆಮೆರಾಗಳ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ. ಅಲ್ಲದೆ, ಈ ಸಿಸಿಟಿವಿ ಕೆಮೆರಾದಲ್ಲಿ 15 ದಿನಗಳ ದೃಶ್ಯಾವಳಿ ಲಭ್ಯವಿರಬೇಕು. ಅಗತ್ಯವಿದ್ದರೆ, ಅಧಿಕಾರಿಗಲು ಅದನ್ನು ಪರಿಶೀಲಿಸಬಹುದು ಎಂದು ಹೇಳಿದೆ.

ಸಿಬಿಎಸ್‌ಇ ಶಾಲೆಗಳ ಮಾನ್ಯತೆಯ ಬೈಲಾ-2018ಕ್ಕೆ ತಿದ್ದುಪಡಿ ತಂದು ಸಿಸಿಟಿವಿ ಕೆಮರಾ ಅಳವಡಿಕೆ ಕಡ್ಡಾಯ ಮಾಡಲಾಗಿದೆ ಎಂದು ಸಿಬಿಎಸ್‌ಇ ಸೋಮವಾರ ಹೊರಡಿಸಿದ ನಿರ್ದೇಶನದಲ್ಲಿ ಹೇಳಿದೆ.

ಸಿಬಿಎಸ್‌ಇಯ ಇತ್ತೀಚೆಗಿನ ನಿರ್ದೇಶನ ಶಾಲಾ ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷೆ ಹಾಗೂ ಯೋಗಕ್ಷೇಮವನ್ನು ಹೆಚ್ಚಿಸುವ, ಅವರನ್ನು ಬೆದರಿಕೆಯಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆ ಎಂದು ಸಿಬಿಎಸ್‌ಇ ನಿರ್ದೇಶನ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News