2026 ಎಪ್ರಿಲ್‌ನಿಂದ 2027 ಫೆಬ್ರವರಿ ವರೆಗೆ 2 ಹಂತಗಳಲ್ಲಿ ಜನಗಣತಿ: ಲೋಕಸಭೆಗೆ ಕೇಂದ್ರ ಸರಕಾರ ಮಾಹಿತಿ
ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ, ಡಿ. 2: 2027ರ ಜನಗಣತಿಯಕೇಂದ್ರ ಸರಕಾರನ್ನು ಎರಡು ಹಂತಗಳಲ್ಲಿ ನಡೆಸಲಾಗುವುದು. ಮೊದಲ ಹಂತ 2026 ಎಪ್ರಿಲ್ ಹಾಗೂ ಸೆಪ್ಟಂಬರ್ ನಡುವೆ ಹಾಗೂ ಎರಡನೇ ಹಂತ 2027ರ ಫೆಬ್ರವರಿಯಲ್ಲಿ ನಡೆಯಲಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ.
ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ನಿತ್ಯಾನಂದ ರಾಯ್, ಜನಗಣತಿ ಎರಡು ಹಂತಗಳನ್ನು ಒಳಗೊಂಡಿರುತ್ತದೆ. ಮೊದಲ ಹಂತದಲ್ಲಿ ಮನೆಯನ್ನು ಪಟ್ಟಿ ಹಾಗೂ ಮನೆಯನ್ನು ಗಣತಿ ಮಾಡಲಾಗುವುದು. ಎರಡನೇ ಹಂತದಲ್ಲಿ ಜನಸಂಖ್ಯೆಯನ್ನು ಗಣತಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಲಡಾಖ್ ಕೇಂದ್ರಾಡಳಿತ ಪ್ರದೇಶ, ಜಮ್ಮು ಹಾಗೂ ಕಾಶ್ಮೀರ, ಹಿಮಾಚಲಪ್ರದೇಶ, ಉತ್ತರಾಖಂಡ ರಾಜ್ಯಗಳ ಹಿಮದಿಂದ ಆವೃತವಲ್ಲದ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ 2027 ಫೆಬ್ರವರಿಯಲ್ಲಿ ಉಲ್ಲೇಖ ದಿನಾಂಕ 00:00 ಗಂಟೆಗೆ ಜನಗಣತಿ ನಡೆಯಲಿದೆ. ಅಲ್ಲಿ ಜನಗಣತಿಯನ್ನು 2026 ಸೆಪ್ಟಂಬರ್‌ನಲ್ಲಿ ಉಲ್ಲೇಖ ದಿನಾಂಕ 00:00 ಗಂಟೆಗೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ ಪ್ರಕ್ರಿಯೆಯ ಮುನ್ನ ವಿವಿಧ ಸಚಿವರು, ಇಲಾಖೆಗಳು, ಸಂಘಟನೆಗಳು ಹಾಗೂ ಜನಗಣತಿ ದತ್ತಾಂಶ ಬಳಕೆದಾರರ ಸಲಹೆಗಳನ್ನು ಬಳಸಿಕೊಂಡು ಜನಗಣತಿಯ ಪ್ರಶ್ನಾವಳಿಗಳನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಜನಗಣತಿಗೆ 150 ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಈ ಹಿಂದೆ ನಡೆಸಿದ ಜನಗಣತಿಯಿಂದ ಕಲಿತ ಪಾಠವನ್ನು ಮುಂದಿನ ಜನಗಣತಿ ನಡೆಸುವಾಗ ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರತ್ಯೇಕ ಪ್ರಶ್ನೆಗೆ ಉತ್ತರಿಸುತ್ತಾ ಅವರು, ಈ ವರ್ಷ ಎಪ್ರಿಲ್ 30ರಂದು ನಡೆದ ರಾಜಕೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿ ನಿರ್ಧರಿಸಿದಂತೆ 2027ರ ಜನಗಣತಿಯಲ್ಲಿ ಜಾತಿ ಗಣತಿಯನ್ನು ಕೂಡ ನಡೆಸಲಾಗುವು ಎಂದರು.
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ನಿತ್ಯಾನಂದ ರಾಯ್, ಮುಂಬರುವ ಜನಗಣತಿಯನ್ನು ಡಿಜಿಟಲ್ ವಿಧಾನಗಳ ಮೂಲಕ ನಡೆಸಲಾಗುವುದು. ಮೊಬೈಲ್ ಅಪ್ಲಿಕೇಶನ್ ಮೂಲಕ ದತ್ತಾಂಶ ಸಂಗ್ರಹಿಸಲಾಗುವುದು ಎಂದು ತಿಳಿಸಿದರು.