ಛತ್ತೀಸ್‌ಗಢ ಮದ್ಯ ಹಗರಣ | ಈಡಿಯಿಂದ ಮಾಜಿ ಸಿಎಂ ಭೂಪೇಶ್ ಬಾಘೆಲ್ ಪುತ್ರನ ಆಸ್ತಿ ಮುಟ್ಟುಗೋಲು
ಭೂಪೇಶ್ ಬಾಘೆಲ್‌ರ , ಚೈತನ್ಯ ಬಾಘೆಲ್ | Photo Credit : PTI
ಹೊಸದಿಲ್ಲಿ, ನ. 13: ಛತ್ತೀಸ್‌ಗಢದಲ್ಲಿ ನಡೆದಿದೆ ಎನ್ನಲಾದ ಮದ್ಯ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಅನುಷ್ಠಾನ ನಿರ್ದೇಶನಾಲಯವು ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೆಲ್‌ರ ಮಗ ಚೈತನ್ಯ ಬಾಘೆಲ್‌ಗೆ ಸೇರಿದ 61.20 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
364 ವಾಸ್ತವ್ಯ ನಿವೇಶನಗಳು ಮತ್ತು ಕೃಷಿ ಭೂಮಿ ಸೇರಿದಂತೆ 59.96 ಕೋಟಿ ರೂ. ಮೌಲ್ಯದ ಸ್ಥಿರ ಸೊತ್ತುಗಳು ಮತ್ತು 1.24 ಕೋಟಿ ರೂ. ಮೌಲ್ಯದ ಬ್ಯಾಂಕ್ ಠೇವಣಿಗಳನ್ನು ಅನುಷ್ಠಾನ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ಛತ್ತೀಸ್‌ಗಢ ಮದ್ಯ ಹಗರಣವು ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟುಮಾಡಿದೆ ಮತ್ತು ಖಾಸಗಿ ವ್ಯಕ್ತಿಗಳ ತಿಜೋರಿಯನ್ನು ತುಂಬಿಸಿದೆ. ಈ ಹಗರಣದಲ್ಲಿ 2,500 ಕೋಟಿ ರೂ.ಗೂ ಅಧಿಕ ಹಣವನ್ನು ಖಾಸಗಿ ವ್ಯಕ್ತಿಗಳ ಪಾಲಾಗಿದೆ’’ ಎಂದು ಹೇಳಿಕೆ ತಿಳಿಸಿದೆ.