×
Ad

ಮಹಾರಾಷ್ಟ್ರ ಪೊಲೀಸರ ಸಿನಿಮೀಯ ಕಾರ್ಯಾಚರಣೆ: ರಸ್ತೆ ಹೊಂಡದಿಂದ ಸಿಕ್ಕಿಬಿದ್ದ ಸರಗಳ್ಳರು.!

Update: 2023-07-13 22:46 IST

ಸಾಂದರ್ಭಿಕ ಚಿತ್ರ \ Photo: PTI 

ಪಾಲ್ಘರ್: ರಸ್ತೆಯ ಹೊಂಡದಿಂದ ನಡೆದ ಅಪಘಾತದಿಂದ ಇಬ್ಬರು ಸರಗಳ್ಳರು ಸೆರೆಯಾದ ವಿಲಕ್ಷಣ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

ಜೂನ್ 30 ರ ರಾತ್ರಿ ವಸಾಯಿ ರೈಲು ನಿಲ್ದಾಣದ ಬಳಿ ಮೋಟಾರು ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಮಹಿಳೆಯ ಸರವನ್ನು ಕಿತ್ತು ಪರಾರಿಯಾಗಿದ್ದಾರೆ ಎಂದು ಮಾಣಿಕಪುರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸಂಪತ್ರಾವ್ ಪಾಟೀಲ್ ಹೇಳಿದ್ದಾರೆ.

ಅವರು ಪರಾರಿಯಾಗುತ್ತಿದ್ದಂತೆ, ಬೈಕ್‌ ರಸ್ತೆ ಗುಂಡಿಗೆ ಬಿದ್ದಿದ್ದು, ಸರಗಳ್ಳರು ಗಂಭೀರವಾಗಿ ಗಾಯಗೊಂಡಿದ್ದಾರೆ, ಅದಾಗ್ಯೂ, ಸ್ಥಳದಿಂದ ಸರಗಳ್ಳರು ಪರಾರಿಯಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸಿಸಿಟಿವಿ ದೃಶ್ಯ ನೋಡಿದ ಪೊಲೀಸರು ಕೂಡಲೇ ಆ ಪ್ರದೇಶದಲ್ಲಿನ ಆಸ್ಪತ್ರೆಗಳನ್ನು ಪರಿಶೀಲಿಸಿದ್ದು, ಇಬ್ಬರು ಆರೋಪಿಗಳು ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಪಿಗಳನ್ನು ಅತುಲ್ ತ್ರಿವೇದಿ ಮತ್ತು ರಾಹುಲ್ ಶರ್ಮಾ ಎಂದು ಗುರುತಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಪಾಟೀಲ್ ಹೇಳಿದ್ದಾರೆ.

ಆರೋಪಿಗಳಿಂದ ಕಳವು ಮಾಡಿದ ಚೈನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ.

ಪನ್ವೇಲ್ ನಿವಾಸಿಗಳಾದ ಇವರಿಬ್ಬರ ವಿರುದ್ಧ ಜಿಲ್ಲೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News