ನ್ಯಾಯಾಧೀಶರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ, ಅವರು ಮನೋಲ್ಲಾಸದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು: ಸಿಜೆಐ ಸೂರ್ಯಕಾಂತ್
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ | Photo Credit : PTI
ಹೊಸ ದಿಲ್ಲಿ: ನ್ಯಾಯಾಧೀಶರದ್ದು ಸುದೀರ್ಘ ಕೆಲಸದ ಅವಧಿಯಾಗಿದ್ದು, ಅವರೆಲ್ಲ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಹೀಗಾಗಿ, ಅವರು ತಮ್ಮನ್ನು ತಾವು ಸಕ್ರಿಯರನ್ನಾಗಿಸಿಕೊಳ್ಳಲು ಮನೋಲ್ಲಾಸದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳೆಬೇಕು ಎಂದು ಶನಿವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸಲಹೆ ನೀಡಿದ್ದಾರೆ.
ಅಖಿಲ ಭಾರತ ನ್ಯಾಯಾಧೀಶರ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮುಖ್ಯಟ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಾಧೀಶರೆಲ್ಲ ತಮ್ಮ ವಯೋಮಾನಕ್ಕೆ ಹೊಂದುವಂತಹ ಮನೋಲ್ಲಾಸ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿಬೇಕು ಎಂದು ಕಿವಿಮಾತು ಹೇಳಿದರು.
“ನ್ಯಾಯಾಧೀಶರ ಕೆಲಸದ ಅವಧಿ ಸುದೀರ್ಘವಾಗಿದ್ದು, ಅವರೆಲ್ಲ ಒತ್ತಡದಲ್ಲಿಯೇ ಕೆಲಸ ನಿರ್ವಹಿಸುತ್ತಾರೆ. ವಿಚಾರಣಾ ಕಲಾಪಗಳ ಅವಧಿಯೂ ದೀರ್ಘವಾಗಿರುತ್ತದೆ. ಎಲ್ಲ ನ್ಯಾಯಾಧೀಶರೂ ಮನೋಲ್ಲಾಸದ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಹಾಗೂ ಅದನ್ನವರು ತಮ್ಮ ಅಭ್ಯಾಸವನ್ನಾಗಿಸಿಕೊಳ್ಳಬೇಕು. ತಮ್ಮನ್ನು ತಾವು ಸಕ್ರಿಯರನ್ನಾಗಿಸಿಕೊಳ್ಳಹಲು ಮನೋಲ್ಲಾಸ ಅವರಿಗೆಲ್ಲ ಅತ್ಯಗತ್ಯ” ಎಂದು ಅವರು ಅಭಿಪ್ರಾಯ ಪಟ್ಟರು.
“ಹೈಕೋರ್ಟ್ ನ್ಯಾಯಾಧೀಶರು ಈ ಕ್ರೀಡಾಕೂಟದಲ್ಲಿ ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಿದ್ದಾರೆ. ಇದು ಅವರೆಲ್ಲ ತಮ್ಮ ಆರೋಗ್ಯ ಹಾಗೂ ಸ್ವಾಸ್ಥ್ಯದ ಬಗ್ಗೆ ಜಾಗರೂಕರಾಗಿದ್ದಾರೆ ಎಂಬುದನ್ನು ಸೂಚಿಸುತ್ತಿದೆ” ಎಂದು ಅವರು ಹೇಳಿದರು.
ಈ ವೇಳೆ, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಾಲ್, ಕೇಂದ್ರ ಸಚಿವ ಕಿರಣ್ ರಿಜಿಜು ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಉಪಸ್ಥಿತರಿದ್ದರು.