×
Ad

ಮತ್ತೆ ಕುಸಿದ ರೂಪಾಯಿ ಮೌಲ್ಯ; ಡಾಲರ್ ಎದುರು 86.96 ರೂ.

Update: 2025-02-18 20:42 IST

ಸಾಂದರ್ಭಿಕ ಚಿತ್ರ | PTI 

ಮುಂಬೈ: ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯವು ಬುಧವಾರ ಎಂಟು ಪೈಸೆಯಷ್ಟು ಕುಸಿದಿದ್ದು 86.96 ರೂ. ಆಗಿದೆ. ಆಂತರಿಕ ಶೇರುಮಾರುಕಟ್ಟೆಯಲ್ಲಿ ಕಂಡುಬಂದ ನಕಾರಾತ್ಮಕ ಪ್ರವೃತ್ತಿ ಹಾಗೂ ಸುಸ್ಥಿರವಾದ ವಿದೇಶಿ ನಿಧಿ ಹೊರಹರಿಯುವಿಕೆಯು ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣವಾಗಿದೆ.

ವಿದೇಶಿ ಹೂಡಿಕೆದಾರರು ದೇಶೀಯ ಶೇರುಗಳ ಮಾರಾಟವನ್ನು ಮುಂದುವರಿಸಿರುವುದು ಕೂಡಾ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆಯೆಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ಇಂದು ಬೆಳಗ್ಗೆ ಅಮೆರಿಕನ್ ಡಾಲರ್ ಎದುರು 86.94 ಇದ್ದುದು, ಆನಂತರ 86.96ಕ್ಕೆ ಕುಸಿಯಿತು.

ಸೋಮವಾರದಂದು ರೂಪಾಯಿ ಮೌಲ್ಯವು ಡಾಲರ್ ಎದುರು 17 ಪೈಸೆಯಷ್ಟು ಕುಸಿದು, 86.88ಕ್ಕೆ ತಲುಪಿತ್ತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News