ಹರ್ಯಾಣದಲ್ಲಿ 3.7 ತೀವ್ರತೆಯ ಭೂಕಂಪ: ದಿಲ್ಲಿಯಲ್ಲೂ ಕಂಪಿಸಿದ ಭೂಮಿ
Update: 2025-07-11 20:54 IST
ಸಾಂದರ್ಭಿಕ ಚಿತ್ರ | hindustantimes
ಹೊಸದಿಲ್ಲಿ : ಹರ್ಯಾಣದಲ್ಲಿ 3.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ದಿಲ್ಲಿಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ಹರಿಯಾಣದ ಜಜ್ಜರ್ ಭೂಕಂಪದ ಕೇಂದ್ರಬಿಂದುವಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಕಳೆದ ಎರಡು ದಿನಗಳಲ್ಲಿ ಹರ್ಯಾಣದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದೆ.
ಶುಕ್ರವಾರ ಸಂಜೆ 7.49ಕ್ಕೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಹರ್ಯಾಣದ ರೋಹ್ಟಕ್ ಮತ್ತು ಬಹದ್ದೂರ್‌ಗಢ ಜಿಲ್ಲೆಗಳಲ್ಲಿಯೂ ಕಂಪನದ ಅನುಭವವಾಗಿದೆ.