×
Ad

ಮಾದಕದ್ರವ್ಯ-ಭಯೋತ್ಪಾದನೆ ಪ್ರಕರಣ | ಜಮ್ಮು-ಕಾಶ್ಮೀರದಲ್ಲಿ ಈಡಿ ದಾಳಿ

Update: 2025-11-06 21:47 IST

ಸಾಂದರ್ಭಿಕ ಚಿತ್ರ | Photo Credit : PTI

ಗುವಾಹಟಿ, ನ. 6: ಜಮ್ಮು ಹಾಗೂ ಕಾಶ್ಮೀರದ ಶಂಕಿತ ಮಾದಕ ದ್ರವ್ಯ- ಭಯೋತ್ಪಾದನೆ ಹಣಕಾಸು ಜಾಲಗಳ ವಿರುದ್ಧ ಜಾರಿ ನಿರ್ದೇಶನಾಲಯ ಗುರುವಾರ ಹೊಸ ಕಾರ್ಯಾಚರಣೆ ಆರಂಭಿಸಿದೆ.

ಮಾಜಿ ಸಚಿವ ಜತಿಂದರ್ ಸಿಂಗ್ ಆಲಿಯಾಸ್ ಬಾಬು ಸಿಂಗ್ ಅವರ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ.

ಭಯೋತ್ಪಾದಕ ಸಂಪರ್ಕಗಳ ಮೂಲಕ ಹವಾಲ ವ್ಯವಹಾರ ಆರೋಪದ ಕುರಿತಂತೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಶ್ರೀನಗರದ 6 ಹಾಗೂ ಜಮ್ಮುವಿನ 2 ಸ್ಥಳಗಳಲ್ಲಿ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಎಂದು ಈಡಿ ಅಧಿಕಾರಿಗಳು ತಿಳಿಸಿದ್ದಾರೆ.

2022ರಲ್ಲಿ ಬಾಬು ಸಿಂಗ್‌ ಗಾಗಿ ಕಾಶ್ಮೀರದಿಂದ ಜಮ್ಮುವಿಗೆ 6.9 ಲಕ್ಷ ರೂ. ಹವಾಲ ಹಣವನ್ನು ಸಾಗಿಸಿದ ಆರೋಪದಲ್ಲಿ ಮುಹಮ್ಮದ್ ಶರೀಫ್ ಶಾ ಅವರನ್ನು ಬಂಧಿಸಲಾಗಿತ್ತು. ಅನಂತರ ಈ ಪ್ರಕರಣ ತನಿಖೆ ಆರಂಭವಾಯಿತು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News