×
Ad

100 ದೇಶಗಳಿಗೆ ಭಾರತದ ಇಲೆಕ್ಟ್ರಿಕ್ ಕಾರುಗಳ ರಫ್ತು: ಮೋದಿ

Update: 2025-08-26 21:06 IST

ನರೇಂದ್ರ ಮೋದಿ |PTI 

ಹೊಸದಿಲ್ಲಿ, ಆ. 26: ಭಾರತದಲ್ಲಿ ಉತ್ಪಾದನೆಯಾಗುವ ಇಲೆಕ್ಟ್ರಿಕ್ ವಾಹನಗಳನ್ನು 100ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ‘ಮೇಡ್ ಇನ್ ಇಂಡಿಯಾ’ ಮುದ್ರೆ ಹೊಂದಿರುವ ಇಲೆಕ್ಟ್ರಿಕ್ ವಾಹನಗಳು 10ಕ್ಕೂ ಅಧಿಕ ದೇಶಗಳ ರಸ್ತೆಗಳಲ್ಲಿ ಓಡಾಡಲಿವೆ ಎಂಬುದಾಗಿಯೂ ಅವರು ಹೇಳಿದರು.

‘‘ಇನ್ನು, ಜಗತ್ತಿನಾದ್ಯಂತದ 10ಕ್ಕೂ ಅಧಿಕ ದೇಶಗಳಲ್ಲಿ ಓಡಾಡುವ ಇಲೆಕ್ಟ್ರಿಕ್ ವಾಹನಗಳು ‘ಮೇಡ್ ಇನ್ ಇಂಡಿಯಾ’ ಮುದ್ರೆಯನ್ನು ಹೊಂದಲಿವೆ’’ ಎಂದು ಮೋದಿ ಹೇಳಿದರು. ಭಾರತದಲ್ಲಿ ವಾಹನಗಳನ್ನು ಉತ್ಪಾದಿಸುತ್ತಿರುವ ಮತ್ತು ಭಾರತದಿಂದಲೇ ವಾಹನಗಳನ್ನು ರಫ್ತು ಮಾಡುತ್ತಿರುವ ಜಪಾನ್‌ನ ಸುಝುಕಿ ಕಂಪೆನಿಯನ್ನು ಅವರು ಶ್ಲಾಘಿಸಿದರು.

ಗುಜರಾತ್‌ನ ಹಂಸಲ್‌ಪುರ ಸ್ಥಾವರದಿಂದ ಮಾರುತಿ- ಸುಝುಕಿ ಕಂಪೆನಿಯ ಇ-ವಿಟಾರ ಇಲೆಕ್ಟ್ರಿಕ್ ಕಾರಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡುತ್ತಿದ್ದರು.

ಜಪಾನ್ ಸುಝುಕಿ ಕಂಪೆನಿಯು ಭಾರತದಲ್ಲಿ ಇಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುತ್ತಿರುವುದು ಉಭಯ ದೇಶಗಳ ನಡುವಿನ ಗಾಢ ಮೈತ್ರಿಯನ್ನು ಸೂಚಿಸುವುದು ಮಾತ್ರವಲ್ಲ, ಭಾರತದ ಮೇಲೆ ಜಗತ್ತಿ ಇಟ್ಟಿರುವ ವಿಶ್ವಾಸವನ್ನೂ ಸೂಚಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News