×
Ad

ಅಣಕು ಮತದಾನಕ್ಕಾಗಿ EVM ಸಿಂಬಲ್ ಲೋಡಿಂಗ್ ಘಟಕವನ್ನು ಬದಲಿಸುವಂತಿಲ್ಲ: ಸುಪ್ರೀಂ ಕೋರ್ಟ್

Update: 2025-05-08 17:12 IST

ಸುಪ್ರೀಂ ಕೋರ್ಟ್ | PTI

ಹೊಸದಿಲ್ಲಿ: ಅಭ್ಯರ್ಥಿಯೋರ್ವ ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳಲ್ಲಿ ಅಣಕು ಮತದಾನ ನಡೆಸಲು ಬಯಸಿದರೆ ಯಂತ್ರದ ಸಿಂಬಲ್ ಲೋಡಿಂಗ್(ಚುನಾವಣಾ ಚಿಹ್ನೆ ಅಳವಡಿಕೆ) ಘಟಕವನ್ನು ಬದಲಿಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶಿಸಿದೆ. ತನ್ಮೂಲಕ ಇವಿಎಮ್‌ಗಳ ಸಮಗ್ರತೆಯನ್ನು ಪರೀಕ್ಷಿಸಲು ಪರಿಷ್ಕೃತ ತಾಂತ್ರಿಕ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ(ಎಸ್‌ಒಪಿ)ದಲ್ಲಿ ಪರಿಶೀಲನೆಯ ಹೆಚ್ಚುವರಿ ಹಂತಗಳನ್ನು ಸೂಚಿಸಿದೆ.

ಅಭ್ಯರ್ಥಿಯು ಮತದಾನದ ಸಮಯದಲ್ಲಿ ಇವಿಎಮ್‌ಗಳ ಸಮಗ್ರತೆಯನ್ನು ಪರೀಕ್ಷಿಸಲು ಅಣಕು ಮತದಾನವನ್ನು ನಡೆಸಲು ಬಯಸಿದರೆ ಆತ ಅದಕ್ಕಾಗಿ ಲಿಖಿತ ಮನವಿಯನ್ನು ಸಲ್ಲಿಸಬಹುದು. ಅದಾಗಲೇ ಮತದಾನಕ್ಕಾಗಿ ಬಳಸಲಾಗಿರುವ ಇವಿಎಮ್‌ಗಳಲ್ಲಿಯ ಮತ ಎಣಿಕೆಯನ್ನು ಅಭ್ಯರ್ಥಿಗೆ ತೋರಿಸಲಾಗುತ್ತದೆ ಮತ್ತು ನಂತರ ಅದನ್ನು ಅಳಿಸಲಾಗುತ್ತದೆ. ಅಣಕು ಮತದಾನ ನಡೆಸುವಾಗ ಅದಾಗಲೇ ಮತದಾನ ಸಂದರ್ಭದಲ್ಲಿ ಬಳಸಲಾದ ಸಿಂಬಲ್ ಲೋಡಿಂಗ್ ಘಟಕವನ್ನು ಬದಲಿಸುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ಮತ್ತು ನ್ಯಾ.ದೀಪಂಕರ ದತ್ತಾ ಅವರ ಪೀಠವು ಬುಧವಾರ ವಿಚಾರಣೆ ಸಂದರ್ಭದಲ್ಲಿ ಸ್ಪಷ್ಟಪಡಿಸಿತು.

ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ವಿವರಿಸಿದ ಚುನಾವಣಾ ಆಯೋಗದ ಪರಿಷ್ಕೃತ ತಾಂತ್ರಿಕ ಎಸ್‌ಒಪಿಯನ್ನು ಒಪ್ಪಿಕೊಂಡ ಪೀಠವು ಆ ಬಗ್ಗೆ ತೃಪ್ತಿಯನ್ನು ವ್ಯಕ್ತಪಡಿಸಿತು.

ಆದರೆ ಬಿಇಎಲ್ ಮತ್ತು ಇಸಿಐಎಲ್‌ನ ಇಂಜಿನಿಯರ್‌ಗಳು ಇವಿಎಮ್‌ಗಳನ್ನು ಪರಿಶೀಲಿಸಬೇಕು ಮತ್ತು ಅವುಗಳ ತಂತ್ರಾಂಶ ಮತ್ತು ಬರ್ನ್ಟ್ ಮೆಮರಿ ಸುರಕ್ಷಿತವಾಗಿವೆ ಎಂದು ಪ್ರಮಾಣೀಕರಿಸಬೇಕು ಎಂದು ಪೀಠವು ತಿಳಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News