ಮತ್ತೆ ಸಾರ್ವಕಾಲಿಕ ಏರಿಕೆ ಕಂಡ ಚಿನ್ನ; ಇಂದಿನ ದರವಷ್ಟು?
ಸಾಂದರ್ಭಿಕ ಚಿತ್ರ (AI)
ಜನವರಿ 9ರಿಂದ ನಿರಂತರವಾಗಿ ಚಿನ್ನದ ಬೆಲೆ ಏರುತ್ತಿದೆ. ಬೆಲೆಯು ಶೇ 5.25 ದರದಲ್ಲಿ ಏರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಜನವರಿ 12ರಂದು ಚಿನ್ನದ ಬೆಲೆ ಮತ್ತೆ ಸಾರ್ವಕಾಲಿಕ ಏರಿಕೆ ಕಂಡಿದೆ. ಅಮೆರಿಕದ ಫೆಡರಲ್ ಮುಖ್ಯಸ್ಥ ಜೆರೋಮ್ ಪವೆಲ್ ಅವರ ಹೇಳಿಕೆಯ ನಂತರ ಚಿನ್ನದ ದರದಲ್ಲಿ ಏರಿಕೆ ಕಂಡಿದೆ. ಫೆಡ್‌ನ ಪ್ರಧಾನ ಕಚೇರಿಯ ನವೀಕರಣದ ಕುರಿತು ಜೂನ್‌ನಲ್ಲಿ ಕಾಂಗ್ರೆಸ್‌ನಲ್ಲಿ ನೀಡಿದ ಸಾಕ್ಷ್ಯಕ್ಕೆ ಸಂಬಂಧಿಸಿ ನ್ಯಾಯ ಇಲಾಖೆಯಿಂದ ಕೇಂದ್ರೀಯ ಬ್ಯಾಂಕ್‌ಗೆ ಗ್ರ್ಯಾಂಡ್ ಜ್ಯೂರಿ ಸಮನ್ಸ್ ನೀಡಿದ್ದಾರೆ ಎಂದು ಅವರು ಹೇಳಿಕೆ ನೀಡಿದ ನಂತರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜೊತೆಯಲ್ಲಿ ಸಂಕ್ರಾಂತಿಯ ಖರೀದಿಯೂ ಚಿನ್ನದ ಬೆಲೆಯನ್ನು ಏರಿಸಿದೆ.
ಸೋಮವಾರ ಒಂದೇ ದಿನದಲ್ಲಿ ಚೆನ್ನೈ ನಗರದಲ್ಲಿ ಚಿನ್ನ ಬರೋಬ್ಬರಿ ಏರಿಕೆ ಕಂಡಿದೆ. ಹೀಗಾಗಿ ಒಂದು ಗ್ರಾಂ ಶುದ್ಧ ಚಿನ್ನದ ಬೆಲೆ 14,313 ರೂಪಾಯಿಗೆ ಏರಿದೆ. ಬೆಂಗಳೂರಿನಲ್ಲಿ ಶುದ್ಧ ಚಿನ್ನದ ದರ 69 ರೂ. ಏರಿಕೆ ಕಂಡು ಚಿನ್ನದ ಬೆಲೆ 14,215 ರೂ.ಗೆ ತಲುಪಿದೆ. ಜನವರಿ 9ರಿಂದ ನಿರಂತರವಾಗಿ ಚಿನ್ನದ ಬೆಲೆ ಏರುತ್ತಿದೆ. ಬೆಲೆಯು ಶೇ 5.25 ದರದಲ್ಲಿ ಏರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಸೋಮವಾರ ಜನವರಿ 12ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,215 (+69) ರೂ. ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 13,030(+155) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,661 (+127) ರೂ. ಬೆಲೆಗೆ ತಲುಪಿದೆ.
ಭಾರತದಲ್ಲಿ ಚಿನ್ನದ ಇಂದಿನ ದರ ಎಷ್ಟಿದೆ?
2026 ಜನವರಿ 12 ಸೋಮವಾರದಂದು ವಿವಿಧ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 14,215 ರೂ. ಇದ್ದು, ಇಂದು 69 ರೂ. ಏರಿಕೆ ಆಗಿದೆ. 22 ಕ್ಯಾರೆಟ್ 1 ಗ್ರಾಂ ಬೆಲೆ 13,030 ರೂ. ಇದ್ದು, ಇಂದು 155 ರೂ ಹೆಚ್ಚಳ ಆಗಿದೆ. ಹಾಗೆಯೇ 18 ಕ್ಯಾರೆಟ್ 1 ಗ್ರಾಂ ಬೆಲೆ 10,166 ರೂ. ಇದ್ದು, ಸೋಮವಾರ 127 ರೂ. ಏರಿಕೆಯಾಗಿದೆ.
ಬೆಳ್ಳಿಯ ಬೆಲೆ ಭಾರೀ ಏರಿಕೆ
ಬೆಳ್ಳಿ ಬೆಲೆ ಇಂದು ಸೋಮವಾರ 10 ರೂ. ಏರಿಕೆಯಾಗಿದ್ದು, ಒಂದು ಗ್ರಾಂಗೆ 270 ರೂ. ಆಗಿದೆ. ಒಂದು ಕೆಜಿ ಬೆಳ್ಳಿಯ ಬೆಲೆ 2,70,000 ರೂ. ಇದೆ.