ಎರಡು ದಿನಗಳ ಸತತ ಏರಿಕೆ ನಂತರ ಮತ್ತೆ ಕುಸಿದ ಚಿನ್ನದ ಬೆಲೆ
ತಜ್ಞರ ಪ್ರಕಾರ, ಮದುವೆ ಸೀಸನ್‌ಗೆ ಚಿನ್ನ ಖರೀದಿಸುವವರು ಈಗಲೇ ಅರ್ಧ ಚಿನ್ನ ಬುಕ್ ಮಾಡಿ ಉಳಿದರ್ಧ ಚಿನ್ನವನ್ನು ನಂತರ ಖರೀದಿಸಬಹುದು. ಹಾಗೆ ಮಾಡುವುದರಿಂದ ಚಿನ್ನದ ಬೆಲೆ ಏರಿದರೂ ಅಥವಾ ಇಳಿದರೂ ಹೆಚ್ಚು ನಷ್ಟವಾಗದು
ಡಿಸೆಂಬರ್ ಕೊನೆಗೆ ಸತತ ಕುಸಿತ ಕಂಡಿದ್ದ ಚಿನ್ನ ನಂತರ ಎರಡು ದಿನಗಳಲ್ಲಿ ಏರಿಕೆ ಕಂಡಿತ್ತು. ಇದೀಗ ಶನಿವಾರ ಮತ್ತೆ ಬೆಲೆ ಕುಸಿತ ಕಂಡಿದೆ. ಮಕರ ಸಂಕ್ರಾಂತಿ ಕಳೆದ ತಕ್ಷಣ ರಾಜ್ಯಾದ್ಯಂತ ವಿವಾಹದ ಋತು ಶುರುವಾಗುತ್ತಿದೆ. ಆರ್ಥಿಕ ತಜ್ಞರ ಪ್ರಕಾರ ಮಾರುಕಟ್ಟೆ ಸ್ಥಿರವಾಗಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡಾಲರ್ ಮೌಲ್ಯ ಕುಸಿಯುತ್ತಿದ್ದು, ಜನವರಿ 20ರ ನಂತರ ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ.
“ಮದುವೆ ಸೀಸನ್ ಗೆ ಚಿನ್ನ ಖರೀದಿಸುವವರು ಈಗಲೇ ಅರ್ಧ ಚಿನ್ನ ಬುಕ್ ಮಾಡಿ ಉಳಿದರ್ಧ ಚಿನ್ನವನ್ನು ನಂತರ ಖರೀದಿಸಬಹುದು. ಹಾಗೆ ಮಾಡುವುದರಿಂದ ಚಿನ್ನದ ಬೆಲೆ ಏರಿದರೂ ಅಥವಾ ಇಳಿದರೂ ಹೆಚ್ಚು ನಷ್ಟವಾಗದು” ಎನ್ನುತ್ತಾರೆ ತಜ್ಞರು.
ಮಂಗಳೂರಿನಲ್ಲಿ ಇಂದು ಚಿನ್ನದ ದರವೆಷ್ಟು (ಬೆಳಿಗ್ಗೆ)?
ಶನಿವಾರ ಜನವರಿ 3 ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ 13,582(-38) ರೂ., ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 12,450(-35) ರೂ., ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನ 10,187(-28) ರೂ. ಬೆಲೆಗೆ ತಲುಪಿದೆ.
ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ಇಂದು 13,582 ರೂ. ಆಗಿದ್ದು, ಶುಕ್ರವಾರ 13,620 ರೂ. ಇತ್ತು. ನಿನ್ನೆಗಿಂತ ಇಂದು ₹38 ರೂ. ಇಳಿಕೆಯಾಗಿದೆ. ಅದೇ ರೀತಿ 22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ಇಂದು 12,450 ರೂ. ಆಗಿದ್ದು, ಶುಕ್ರವಾರ 12,485 ರೂ. ಇತ್ತು. ನಿನ್ನೆಗಿಂತ ಇಂದು ₹35 ರೂ. ವ್ಯತ್ಯಾಸವಾಗಿದೆ. 18 ಕ್ಯಾರಟ್ ಚಿನ್ನದ ಇಂದು 1 ಗ್ರಾಂ ಬೆಲೆ ₹10,187 ರೂ. ಆಗಿದ್ದು, ಶುಕ್ರವಾರ 10,215 ರೂ. ಇತ್ತು. ನಿನ್ನೆಗಿಂತ ಇಂದು 28 ರೂ. ಇಳಿಕೆ ಕಂಡಿದೆ.
ಭಾರತದ ವಿವಿಧ ನಗರಗಳ ಚಿನ್ನದ ಬೆಲೆ (ಬೆಳಗಿನ ವಹಿವಾಟು):
ಚೆನ್ನೈ: 24 ಕ್ಯಾರಟ್ 13,658 ರೂ., 22 ಕ್ಯಾರಟ್ 12,520 ರೂ., 18 ಕ್ಯಾರಟ್ 10,445 ರೂ.
ಮುಂಬೈ: 24 ಕ್ಯಾರಟ್ 13,582 ರೂ., 22 ಕ್ಯಾರಟ್ 12,450 ರೂ., 18 ಕ್ಯಾರಟ್ 10,187 ರೂ.
ದಿಲ್ಲಿ: 24 ಕ್ಯಾರಟ್ 13,597 ರೂ., 22 ಕ್ಯಾರಟ್ 12,465 ರೂ., 18 ಕ್ಯಾರಟ್ 10,202 ರೂ.
ಕೋಲ್ಕತ್ತಾ: 24 ಕ್ಯಾರಟ್ 13,582 ರೂ., 22 ಕ್ಯಾರಟ್ 12,450 ರೂ., 18 ಕ್ಯಾರಟ್ 10,187 ರೂ.
ಬೆಂಗಳೂರು: 24 ಕ್ಯಾರಟ್ 13,582 ರೂ., 22 ಕ್ಯಾರಟ್ 12,450 ರೂ., 18 ಕ್ಯಾರಟ್ 10,187 ರೂ.
ಹೈದರಾಬಾದ್: 24 ಕ್ಯಾರಟ್ 13,582 ರೂ., 22 ಕ್ಯಾರಟ್ 12,450 ರೂ., 18 ಕ್ಯಾರಟ್ 10,187 ರೂ.
ಕೇರಳ: 24 ಕ್ಯಾರಟ್ 13,582 ರೂ., 22 ಕ್ಯಾರಟ್ 12,450 ರೂ., 18 ಕ್ಯಾರಟ್ 10,187 ರೂ.
ಪುಣೆ: 24 ಕ್ಯಾರಟ್ 13,582 ರೂ., 22 ಕ್ಯಾರಟ್ 12,450 ರೂ., 18 ಕ್ಯಾರಟ್ 10,187 ರೂ.
ವಡೋದರಾ: 24 ಕ್ಯಾರಟ್ 13,587 ರೂ., 22 ಕ್ಯಾರಟ್ 12,455 ರೂ., 18 ಕ್ಯಾರಟ್ 10,192 ರೂ.
ಅಹಮದಾಬಾದ್: 24 ಕ್ಯಾರಟ್ 13,587 ರೂ., 22 ಕ್ಯಾರಟ್ 12,455 ರೂ., 18 ಕ್ಯಾರಟ್ 10,192 ರೂ.
ಇಂದು ಬೆಳ್ಳಿ ಬೆಲೆ ಎಷ್ಟಿದೆ?
ಚಿನ್ನದ ಬೆಲೆ ಇಳಿಕೆಯಾದಂತೆ, ಬೆಳ್ಳಿಯ ಬೆಲೆ ಕೂಡಾ ಇಳಿದಿದೆ. ಒಂದು ಗ್ರಾಂ ಬೆಳ್ಳಿ ದರ ಇಂದು 240 ರೂ. ಆಗಿದ್ದು, ಶುಕ್ರವಾರ 242 ರೂ. ಇತ್ತು. ಪ್ರತೀ ಗ್ರಾಂ ಬೆಳ್ಳಿಯಲ್ಲಿ 2 ರೂ. ಕಡಿಮೆಯಾಗಿದೆ.