ಕುಸಿಯಲು ನಿರಾಕರಿಸುತ್ತಿರುವ ಚಿನ್ನ; ಇಂದಿನ ದರವೆಷ್ಟು?
ಸಾಂದರ್ಭಿಕ ಚಿತ್ರ (AI)
ಭೌಗೋಳಿಕ ರಾಜಕೀಯದ ಉದ್ವಿಘ್ನ ಸ್ಥಿತಿಯಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ಅಸ್ಥಿರ ನಿಲುವು ಮುಖ್ಯವಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಿಸಿದೆ.
ಸಂಕ್ರಾಂತಿ ಹಬ್ಬಕ್ಕೆ ಚಿನ್ನದ ಬೆಲೆ ಕುಸಿಯುವ ಆಸೆಯಲ್ಲಿದ್ದವರಿಗೆ ನಿರಾಸೆಯಾಗಿದೆ. ಕಳೆದ ಕೆಲವು ವಾರಗಳಿಂದ ಚಿನ್ನದ ಬೆಲೆ ಏರಿಕೆ ಮತ್ತು ಇಳಿಕೆಯಾಗುತ್ತಿದೆ. ಎರಡು ದಿನಗಳ ಸತತ ಇಳಿಕೆಯ ನಂತರ ನಿನ್ನೆ ಅಲ್ಪಮಟ್ಟಿಗೆ ಏರಿಕೆಯಾಗಿತ್ತು. ಇಂದು ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೀಗಾಗಿ ವಾರಾಂತ್ಯಕ್ಕೆ ಕುಸಿತದ ಆಶಯದಲ್ಲಿದ್ದವರಿಗೆ ನಿರಾಸೆಯಾಗಿದೆ. ಭೌಗೋಳಿಕ ರಾಜಕೀಯದ ಉದ್ವಿಘ್ನ ಸ್ಥಿತಿಯಲ್ಲಿ ವಿದೇಶಿ ಮಾರುಕಟ್ಟೆಯಲ್ಲಿ ಅಸ್ಥಿರ ನಿಲುವು ಮುಖ್ಯವಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಿಸಿದೆ.
ಮಂಗಳೂರಿನಲ್ಲಿ ಇಂದಿನ ಚಿನ್ನದ ದರವೆಷ್ಟು?
ಶನಿವಾರ ಜನವರಿ 10ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ದಿಢೀರ್ ಏರಿಕೆ ಕಂಡಿದೆ. ಬೆಳಗಿನ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 14,046 (+115) ರೂ. ಗೆ ತಲುಪಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 12,875 (+105) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 10,534 + ₹86 ರೂ. ಬೆಲೆಗೆ ತಲುಪಿದೆ.
ಭಾರತದಲ್ಲಿ 24 ಕ್ಯಾರೆಟ್ ಚಿನ್ನ
ಶನಿವಾರ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 14,046 ರೂ. ಆಗಿದ್ದು, ನಿನ್ನೆ ಇದು13,931 ರೂ. ಆಗಿತ್ತು. ಹಾಗಾಗಿ 1 ಗ್ರಾಂ ಬೆಲೆ 115 ರೂ. ಏರಿಕೆಯಾಗಿದೆ. 1 ಗ್ರಾಂ 22 ಕ್ಯಾರೆಟ್ ಚಿನ್ನವು ಶನಿವಾರ 12,875 ರೂ. ಗೆ ಲಭ್ಯವಿದ್ದು, ನಿನ್ನೆ ಇದು 12,770 ರೂ. ಆಗಿತ್ತು, ಎಂದರೆ 105 ರೂ. ಹೆಚ್ಚಾಗಿದೆ. ಶನಿವಾರ 1 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ 10,534 ರೂ. ಆಗಿದ್ದು, ನಿನ್ನೆ 10,448 ರೂ. ಆಗಿತ್ತು; ಇದರರ್ಥ 86 ರೂ.ಏರಿಕೆಯಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಎಷ್ಟಿದೆ ಬೆಲೆ?
ಬೆಂಗಳೂರು: 24 ಕ್ಯಾರೆಟ್ ಚಿನ್ನ 14,046 ರೂ., 22 ಕ್ಯಾರೆಟ್ 12,875 ರೂ., 18 ಕ್ಯಾರೆಟ್ 10,534 ರೂ. - ಬಹುತೇಕ ಎಲ್ಲಾ ನಗರಗಳಂತೆ ಸ್ಥಿರ ಬೆಲೆ.
ಚೆನ್ನೈ: 24 ಕ್ಯಾರೆಟ್ ಚಿನ್ನ 13,965 ರೂ., 22 ಕ್ಯಾರೆಟ್ 12,900 ರೂ., 18 ಕ್ಯಾರೆಟ್ 10,765 ರೂ. - ಚಿನ್ನದ ಬೆಲೆ ನಗರದಲ್ಲಿ ಸ್ವಲ್ಪ ಕಡಿಮೆ.
ಮುಂಬೈ: 24 ಕ್ಯಾರೆಟ್ ಚಿನ್ನ 14,046 ರೂ., 22 ಕ್ಯಾರೆಟ್ 12,875 ರೂ., 18 ಕ್ಯಾರೆಟ್ 10,534 ರೂ. - ದೈನಂದಿನ ಮಾರುಕಟ್ಟೆ ಬೆಲೆಗಳಿಗೆ ಸಮಾನವಾಗಿದೆ.
ದೆಹಲಿ: 24 ಕ್ಯಾರೆಟ್ ಚಿನ್ನ 14,061 ರೂ., 22 ಕ್ಯಾರೆಟ್. 12,890 ರೂ, 18 ಕ್ಯಾರೆಟ್ 10,549 ರೂ. - ನಗರದಲ್ಲಿ 24 ಕ್ಯಾರೆಟ್ ಚಿನ್ನವು ಗರಿಷ್ಠ ಬೆಲೆಗೆ ಲಭ್ಯ.
ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನ 14,046 ರೂ., 22 ಕ್ಯಾರೆಟ್ 12,875 ರೂ., 18 ಕ್ಯಾರೆಟ್ 10,534 ರೂ. - ಮಾರುಕಟ್ಟೆ ಸರಾಸರಿ ಬೆಲೆಯೊಂದಿಗೆ ಲಭ್ಯ.
ಹೈದರಾಬಾದ್: 24 ಕ್ಯಾರೆಟ್ ಚಿನ್ನ 14,046 ರೂ., 22 ಕ್ಯಾರೆಟ್ 12,875 ರೂ., 18 ಕ್ಯಾರೆಟ್ 10,534 ರೂ. - ಚಿನ್ನದ ಬೆಲೆ ರಾಜ್ಯದಲ್ಲಿ ಸ್ಥಿರವಾಗಿದೆ.
ಕೇರಳ: 24 ಕ್ಯಾರೆಟ್ ಚಿನ್ನ 14,046 ರೂ., 22 ಕ್ಯಾರೆಟ್ 12,875 ರೂ., 18 ಕ್ಯಾರೆಟ್ 10,534 ರೂ. - ಸಾಮಾನ್ಯ ಮಾರುಕಟ್ಟೆ ಬೆಲೆಯೊಂದಿಗೆ ಲಭ್ಯ.
ಅಹಮದಾಬಾದ್: 24 ಕ್ಯಾರೆಟ್ ಚಿನ್ನ 14,051 ರೂ., 22 ಕ್ಯಾರೆಟ್ 12,880 ರೂ., 18 ಕ್ಯಾರೆಟ್ 10,539 ರೂ. - 24K ಚಿನ್ನ ಮಾರುಕಟ್ಟೆ ಬೆಲೆಗೆ ಸಮೀಪ.
ಭಾರತದಲ್ಲಿ ಬೆಳ್ಳಿ ಬೆಲೆ
ಶನಿವಾರ ಭಾರತದಲ್ಲಿ ಬೆಳ್ಳಿಯ ಬೆಲೆಗಳಲ್ಲಿ ಏರಿಕೆ ಕಂಡು ಬಂದಿದೆ. 1 ಗ್ರಾಂ ಬೆಳ್ಳಿ ಶನಿವಾರ 260 ರೂ. ಗೆ ಲಭ್ಯವಿದ್ದು, ನಿನ್ನೆ ರೂ. 249 ಆಗಿತ್ತು, ಇದರಿಂದ ರೂ. 11 ಹೆಚ್ಚಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ಶನಿವಾರ 2,600 ರೂ. ಆಗಿದ್ದು, ನಿನ್ನೆಯ ಬೆಲೆ 2,490 ರೂ. ಹೋಲಿಸಿದರೆ ರೂ. 110 ಹೆಚ್ಚಾಗಿದೆ.