ತನ್ನ ಮೇಲೆ ರೈಲು ಹರಿದರೂ ಮಕ್ಕಳಿಗೆ ಆಸರೆಯಾದ ಮಹಾತಾಯಿ!
Photo: indiatoday.in
ಪಾಟ್ನಾ : ಬಿಹಾರದ ಬರ್ಹ್ ರೈಲು ನಿಲ್ದಾಣದಲ್ಲಿ ಶನಿವಾರ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಮೇಲೆ ರೈಲು ಸಾಗಿದರೂ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಘಟನೆ ವರದಿಯಾಗಿದೆ ಎಂದು indiatoday ವರದಿ ಮಾಡಿದೆ.
ಮಹಿಳೆ ಮತ್ತು ಆಕೆಯ ಮಕ್ಕಳು ಬೇಗುಸರಾಯ್‌ನಿಂದ ತಮ್ಮ ಕುಟುಂಬದೊಂದಿಗೆ ಭಾಗಲ್ಪುರದಿಂದ ದಿಲ್ಲಿಗೆ ಚಲಿಸುವ ವಿಕ್ರಮಶಿಲಾ ಎಕ್ಸ್‌ಪ್ರೆಸ್‌ನಲ್ಲಿ ದಿಲ್ಲಿಗೆ ಪ್ರಯಾಣಿಸುತ್ತಿದ್ದರು.
ಶನಿವಾರ ಬರ್ಹ್‌ನಲ್ಲಿ ರೈಲು ಹತ್ತುವಾಗ ಪ್ಲಾಟ್‌ಫಾರ್ಮ್‌ನಲ್ಲಿ ಭಾರಿ ಜನಸಂದಣಿ ಇತ್ತು. ನೂಕುನುಗ್ಗಲಿನ ನಡುವೆ ಮಹಿಳೆ ತನ್ನ ಮಕ್ಕಳೊಂದಿಗೆ ಟ್ರ್ಯಾಕ್‌ನಲ್ಲಿ ಬಿದ್ದಿದ್ದಾರೆ.
ಜನರು ಆಕೆಯನ್ನು ಗಮನಿಸಿ ರಕ್ಷಿಸಲು ಮುಂದಾದಾಗ ರೈಲು ನಿಲ್ದಾಣದಿಂದ ಹೊರಡಲು ಪ್ರಾರಂಭಿಸಿತು. ಕೂಡಲೇ ಮಹಿಳೆ ಹಳಿಗಳ ಮೇಲೆ ಬಾಗಿ ಕುಳಿತು, ರೈಲು ಅವರ ಮೇಲೆ ಹೋಗುತ್ತಿದ್ದಂತೆ ತನ್ನ ಪೂರ್ಣ ದೇಹದಿಂದ ಮಕ್ಕಳನ್ನು ಮುಚ್ಚಿದರು.
ರೈಲು ಪ್ಲಾಟ್‌ಫಾರ್ಮ್‌ನಿಂದ ಹೊರಟ ನಂತರ, ಜನರು ಪ್ಲಾಟ್‌ಫಾರ್ಮ್‌ನಿಂದ ಮಹಿಳೆ ಮತ್ತು ಅವರ ಮಕ್ಕಳನ್ನು ರಕ್ಷಿಸಿದರು.
ಅವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು.