ಗುಜರಾತ್ | ಸೇತುವೆ ದುರಸ್ತಿ ವೇಳೆ ಸ್ಲ್ಯಾಬ್ ಕುಸಿತ ; ಎಂಟು ಜನರು ಪವಾಡಸದೃಶ ಪಾರು
Update: 2025-07-15 21:07 IST
PC : newindianexpress.com
ಅಹ್ಮದಾಬಾದ್: 21 ಜೀವಗಳನ್ನು ಬಲಿ ತೆಗೆದುಕೊಂಡಿದ್ದ ವಡೋದರಾ ಮತ್ತು ಆನಂದ ನಡುವಿನ ಗಂಭೀರಾ ಸೇತುವೆ ಕುಸಿತದ ನೆನಪು ಇನ್ನೂ ಹಸಿರಾಗಿರುವಾಗಲೇ ಮಂಗಳವಾರ ಜುನಾಗಡದ ಮಂಗ್ರೋಲ್ ತಾಲೂಕಿನಲ್ಲಿ ಇನ್ನೊಂದು ಸೇತುವೆ ಅವಘಡ ಸಂಭವಿಸಿರುವುದು ಗುಜರಾತ್ ನ್ನು ತಲ್ಲಣಗೊಳಿಸಿದೆ.
ಅಜಾಕ್ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಸೇತುವೆಯ ಭಾಗವು ಕುಸಿದ ಪರಿಣಾಮ ಎಂಟು ಜನರು ನದಿಗೆ ಬಿದ್ದಿದ್ದರು. ಜೊತೆಗೆ ಬ್ರೆಕರ್ ಯಂತ್ರವೂ ನದಿಗೆ ಉರುಳಿತ್ತು. ಪವಾಡಸದೃಶವಾಗಿ ಎಲ್ಲ ಎಂಟೂ ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆತಂಕ-ಭೀತಿ ಎಲ್ಲೆಡೆ ಹರಡುತ್ತಿದ್ದಂತೆ ಜುನಾಗಡ ಜಿಲ್ಲೆಯ ಕಾರ್ಯ ನಿರ್ವಾಹಕ ಇಂಜನಿಯರ್, ಸೇತುವೆ ಕುಸಿದಿರಲಿಲ್ಲ, ದುರಸ್ತಿಗಾಗಿ ಅದನ್ನು ಸುರಕ್ಷಿತವಾಗಿ ಕಳಚಲಾಗುತ್ತಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ.