×
Ad

ಮನಮೋಹನ್ ಸಿಂಗ್ ನಿಧನ | ನಾಳೆ ಕೇಂದ್ರ ಸರಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ

Update: 2024-12-27 21:31 IST

ಡಾ. ಮನಮೋಹನ್ ಸಿಂಗ್ | PTI 

ಹೊಸದಿಲ್ಲಿ : ಗುರುವಾರ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಕೇಂದ್ರ ಸಂಪುಟ ಶುಕ್ರವಾರ ಸಂತಾಪ ನಿರ್ಣಯ ಅಂಗೀಕರಿಸಿತು.

ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯುವ ಶನಿವಾರ ಅಗಲಿದ ನಾಯಕನಿಗೆ ಗೌರವ ಸಲ್ಲಿಸುವ ಅವಕಾಶ ನೀಡಲು ಕೇಂದ್ರ ಸರಕಾರದ ಕಚೇರಿಗಳು ಹಾಗೂ ಕೇಂದ್ರ ಸರಕಾರಕ್ಕೆ ಒಳಪಟ್ಟ ಉದ್ದಿಮೆಗಳಿಗೆ ಅರ್ಧ ದಿನದ ರಜೆ ಘೋಷಿಸಿರುವುದಾಗಿ ನಿರ್ಣಯದಲ್ಲಿ ಸೂಚಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News