×
Ad

ಸೂಕ್ತ ಸಮಯದಲ್ಲಿ ನಾನು ನಿವೃತ್ತನಾಗುತ್ತೇನೆ: ಉಪ ರಾಷ್ಟ್ರಪತಿ ಧನ್ಕರ್

Update: 2025-07-10 19:30 IST

ಜಗದೀಪ್ ಧನ್ಕರ್ | PTI 

ಹೊಸದಿಲ್ಲಿ: ದೇವರು ಇಚ್ಛಿಸಿದರೆ ನಾನು ಸೂಕ್ತ ಸಮಯದಲ್ಲಿ ನಿವೃತ್ತನಾಗುತ್ತೇನೆ ಎಂದು ಗುರುವಾರ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಘೋಷಿಸಿದ್ದಾರೆ‌‌.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

"ನಾನು ಆಗಸ್ಟ್, 2027ರಲ್ಲಿ ದೇವರು ಇಚ್ಛಿಸಿದರೆ ನಿವೃತ್ತನಾಗಲಿದ್ದೇನೆ" ಎಂದು ಅವರು ಈ ವೇಳೆ ಸ್ಪಷ್ಟಪಡಿಸಿದ್ದಾರೆ.

ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ಐದು ವರ್ಷಗಳ ಅವಧಿ ಆಗಸ್ಟ್ 10, 2027ರಂದು ಅಂತ್ಯಗೊಳ್ಳಲಿದೆ.

ಹಿರಿಯ ವಕೀಲರಾದ ಜಗದೀಪ್ ಧನ್ಕರ್, ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುವಾಗ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದು, ಉಪ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News