×
Ad

ವಕೀಲರು ನಿಗದಿತ ಸಮಯದೊಳಗೆ ವಾದ ಮಂಡಿಸಬೇಕು: ಇದೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್‌ ಸುತ್ತೋಲೆ!

Update: 2025-12-31 12:38 IST

Photo credit: PTI

ಹೊಸದಿಲ್ಲಿ: ನೋಟಿಸ್ ನಂತರದ ಮತ್ತು ನಿಯಮಿತ ವಿಚಾರಣೆಯ ಪ್ರಕರಣಗಳಲ್ಲಿ ವಕೀಲರ ಮೌಖಿಕ ವಾದಗಳಿಗೆ ಸಮಯ ಮಿತಿಯನ್ನು ಸೂಚಿಸುವ ಹೊಸ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP)ವನ್ನು ಸುಪ್ರೀಂ ಕೋರ್ಟ್ ಪರಿಚಯಿಸಿದೆ.

ಈ ಕುರಿತು ಡಿಸೆಂಬರ್ 29 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನಿರ್ದೇಶನದ ಮೇರೆಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ನ್ಯಾಯಾಲಯದ ನಿರ್ವಹಣೆಯನ್ನು ಸುಧಾರಿಸುವುದು ಮತ್ತು ಪೀಠಗಳ ನಡುವೆ ಕೆಲಸದ ಸಮಯದ ಸಮಾನ ವಿತರಣೆ ಖಚಿತಪಡಿಸಿಕೊಳ್ಳುವ ಉದ್ದೇಶವನ್ನು ಈ ಕ್ರಮವು ಹೊಂದಿದೆ.

ಸುತ್ತೋಲೆಯ ಪ್ರಕಾರ, ಹಿರಿಯ ವಕೀಲರು ಮತ್ತು ವಾದ ಮಂಡಿಸುವ ವಕೀಲರು ಮೌಖಿಕ ವಾದಗಳಿಗೆ ಎಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಮುಂಚಿತವಾಗಿ ತಿಳಿಸಬೇಕಿದೆ. ವಿಚಾರಣೆಗೆ ಕನಿಷ್ಠ ಒಂದು ದಿನ ಮೊದಲು ನ್ಯಾಯಾಲಯದ ಆನ್‌ಲೈನ್‌ ಹಾಜರಾತಿ ಸ್ಲಿಪ್ ಪೋರ್ಟಲ್ ಮೂಲಕ ಈ ಮಾಹಿತಿ ನೀಡಬೇಕಿದೆ.

ಸಮಯಸೂಚಿಗಳ ಜೊತೆಗೆ, ಎಲ್ಲಾ ವಾದ ಮಂಡಿಸುವ ವಕೀಲರು ಅಥವಾ ಹಿರಿಯ ವಕೀಲರು ವಿಚಾರಣೆಯ ದಿನಾಂಕಕ್ಕೆ ಕನಿಷ್ಠ ಮೂರು ದಿನಗಳ ಮೊದಲು ಐದು ಪುಟಗಳಿಗೆ ಸೀಮಿತವಾದ ಸಂಕ್ಷಿಪ್ತ ಲಿಖಿತ ಸಲ್ಲಿಕೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ತಿಳಿಸಿದೆ.

ಎಲ್ಲಾ ವಕೀಲರು ನಿಗದಿಪಡಿಸಿದ ಸಮಯಾವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ತಮ್ಮ ಮೌಖಿಕ ವಾದಗಳನ್ನು ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News