×
Ad

2024ರಲ್ಲಿ ಭಾರತದಲ್ಲಿ ಅತ್ಯಧಿಕ ಪ್ರಮಾಣದ ಕ್ಷಯ ರೋಗ ಪ್ರಕರಣಗಳು: WHO ವರದಿ

Update: 2025-11-12 22:22 IST

ಸಾಂದರ್ಭಿಕ ಚಿತ್ರ | Photo Credit : freepik

ಹೊಸದಿಲ್ಲಿ: 2024ರಲ್ಲಿ ಭಾರತದಲ್ಲಿ ಅತ್ಯಧಿಕ ಪ್ರಮಾಣದ ಕ್ಷಯ ರೋಗ ಪ್ರಕರಣಗಳು ವರದಿಯಾಗಿದ್ದು, ನಂತರದ ಸ್ಥಾನದಲ್ಲಿ ಇಂಡೋನೇಶಿಯಾ, ಫಿಲಿಪೈನ್ಸ್, ಚೀನಾ ಹಾಗೂ ಪಾಕಿಸ್ತಾನಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕ್ಷಯ ರೋಗ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕ್ಷಯ ರೋಗದ ನಿರ್ಮೂಲನೆಗಾಗಿ ಒದಗಿಸಲಾಗುತ್ತಿರುವ ಅನುದಾನವನ್ನು ಮತ್ತಷ್ಟು ಹೆಚ್ಚಿಸಬೇಕಿದೆ ಎಂದೂ ಈ ವರದಿಯಲ್ಲಿ ಕರೆ ನೀಡಲಾಗಿದೆ.

2024ರಲ್ಲಿ ಕ್ಷಯ ರೋಗಕ್ಕೆ ತುತ್ತಾಗಿರುವವರ ಪೈಕಿ ಭೌಗೋಳಿಕವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶ್ಯ ಪ್ರಾಂತ್ಯದಲ್ಲಿ ಶೇ. 34ರಷ್ಟು, ಪಶ್ಚಿಮ ಪೆಸಿಫಿಕ್ ಪ್ರಾಂತ್ಯದಲ್ಲಿ ಶೇ. 27ರಷ್ಟು ಹಾಗೂ ಆಫ್ರಿಕಾದಲ್ಲಿ ಶೇ. 25ರಷ್ಟು ಇದ್ದು, ಕೊಂಚ ಪ್ರಮಾಣದ ಪ್ರಕರಣಗಳು ಪೂರ್ವ ಮೆಡಿಟೇರನಿಯನ್ (ಶೇ. 8.6), ಅಮೆರಿಕ(ಶೇ. 3.3) ಹಾಗೂ ಯೂರೋಪ್ (ಶೇ. 1.9)ನಲ್ಲಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಕ್ಷಯ ರೋಗ ವ್ಯಾಪಕವಾಗಿರುವ 30 ದೇಶಗಳ ಪೈಕಿ ಜಗತ್ತಿನಾದ್ಯಂತ ವರದಿಯಾಗಿರುವ ಒಟ್ಟಾರೆ ಕ್ಷಯ ರೋಗಗಳ ಪ್ರಮಾಣ ಶೇ. 87ರಷ್ಟಿದ್ದರೆ, ಈ ಪೈಕಿ 8 ದೇಶಗಳಲ್ಲೇ ಒಟ್ಟಾರೆ ಜಾಗತಿಕ ಪ್ರಮಾಣದ ಶೇ. 67ರಷ್ಟಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಈ ಪ್ರಕರಣಗಳ ಪೈಕಿ ಭಾರತದಲ್ಲಿ ಅತ್ಯಧಿಕ ಪ್ರಮಾಣದ ಪ್ರಕರಣಗಳು ವರದಿಯಾಗಿದ್ದು, ಶೇ. 25ರಷ್ಟಿವೆ. ನಂತರದ ಸ್ಥಾನಗಳಲ್ಲಿ ಇಂಡೋನೇಶಿಯಾ (ಶೇ. 10), ಫಿಲಿಪೈನ್ಸ್ (ಶೇ. 6.8), ಚೀನಾ (ಶೇ. 6.5), ಪಾಕಿಸ್ತಾನ (ಶೇ. 6.3), ನೈಜೀರಿಯಾ (ಶೇ. 4.8), ದಿ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ (ಶೇ. 3.9) ಹಾಗೂ ಬಾಂಗ್ಲಾದೇಶ (ಶೇ. 3.6) ಸೇರಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News