×
Ad

ಪಾಟ್ನಾ ರ‍್ಯಾಲಿಯಲ್ಲಿ ಚುನಾವಣಾ ಕಹಳೆ ಮೊಳಗಿಸಿದ ‘ಇಂಡಿಯಾ’

Update: 2024-03-03 22:40 IST

 ರಾಹುಲ್ ಗಾಂಧಿ, ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಹಾಗೂ ಅಖಿಲೇಶ್ ಯಾದವ್ | Photo: PTI  

ಹೊಸದಿಲ್ಲಿ : ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಆಯೋಜಿಸಿದ್ದ ಬೃಹತ್ ‘ಜನ ವಿಶ್ವಾಸ ಮಹಾ ರ‍್ಯಾಲಿ’ ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ರವಿವಾರ ನಡೆಯಿತು.

ಈ ರ‍್ಯಾಲಿಯ ಮೂಲಕ ‘ಇಂಡಿಯಾ’ ತನ್ನ ಲೋಕಸಭಾ ಚುನಾವಣೆಯ ಪ್ರಚಾರ ಆರಂಭಿಸಿದೆ.

ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘‘ಸುಳ್ಳಿನ ಸರದಾರ” ಎಂದು ಕರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ತನ್ನ ಭಾಷಣದಲ್ಲಿ ಸುಳ್ಳು ಹರಡುವುದರಲ್ಲಿ ಪ್ರಧಾನಿ ಅವರು ನಿಸ್ಸೀಮರು ಎಂದು ಆರೋಪಿಸಿದರು.

ರ‍್ಯಾಲಿಯಲ್ಲಿ ರಾಹುಲ್ ಗಾಂಧಿ, ಲಾಲು ಪ್ರಸಾದ್ ಯಾದವ್, ತೇಜಸ್ವಿ ಯಾದವ್ ಹಾಗೂ ಅಖಿಲೇಶ್ ಯಾದವ್ ಅವರಂತಹ ಪ್ರತಿಪಕ್ಷದ ನಾಯಕರು ಪಾಲ್ಗೊಂಡರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News